ದೇಶದಲ್ಲಿ ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನ್ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಘೋಷಿಸಿದರು.
ಅಂತಾರಾಷ್ಟ್ರೀಯ ಯೋಗ ದಿನವಾದ ಜೂನ್ 21 ರಿಂದ ಇದು ಜಾರಿಯಾಗಲಿದೆ ಎಂದು ರಾಷ್ಟ್ರ ಉದ್ದೇಶಿ ಮಾಡಿದ ಭಾಷಣದಲ್ಲಿ ಈ ವಿಷಯ ತಿಳಿಸಿದರು.
ಪ್ರಧಾನಮಂತ್ರಿಯಾಗಿ ಪ್ರಮುಖ ಘೋಷಣೆಗಳು :
- ಕೊರೊನಾದ 2ನೇ ಅಲೆಯೊಂದಿಗೆ ನಮ್ಮ ಹೋರಾಟ ಮುಂದುವರೆಯುತ್ತಿದೆ. ಈ ಹೋರಾಟದಲ್ಲಿ ನಾವು ನಮ್ಮ ಸಂಬಂಧಿಕರು, ಪರಿಚಿತರನ್ನು ಕಳೆದುಕೊಂಡಿದ್ದೇವೆ.
- ಕೊರೊನಾ ಆಸ್ಪತ್ರೆ, ಐಸಿಯು, ವೆಂಟಿಲೇಟರ್, ಟೆಸ್ಟಿಂಗ್ ನೆಟ್ವರ್ಕ್ ಸೇರಿದಂತೆ ಹೊಸ ಹೆಲ್ತ್ ಮೂಲಸೌಕರ್ಯ ತಯಾರಾಗಿದೆ.
- ಭಾರತದಲ್ಲಿ ಮೆಡಿಕಲ್ ಆಕ್ಸಿಜನ್ನ ಬೇಡಿಕೆ ಇದ್ದಕ್ಕಿದ್ದಂತೆ ಏರಿಕೆಯಾಯ್ತು. ಹಿಂದೆಂದೂ ಇಂಥ ಬೇಡಿಕೆ ಸೃಷ್ಟಿಯಾಗಿರಲಿಲ್ಲ.
- ಆಕ್ಸಿಜನ್ ಪೂರೈಸಲು ಆಕ್ಸಿಜನ್ ರೈಲು, ವಿಮಾನ, ಹಡಗು ಸೇರಿದಂತೆ ಎಲ್ಲ ಸಾರಿಗೆಯನ್ನು ಬಳಸಲಾಯ್ತು.
- ಮಿಷನ್ ಇಂಧ್ರಧನುಷ್ ಲಾಂಚ್ ಮಾಡಲಾಯ್ತು. ಈ ಮೂಲಕ ದೇಶದಲ್ಲಿ ಯಾರ್ಯಾರಿಗೆ ವ್ಯಾಕ್ಸಿನ್ ನೀಡಬೇಕಿತ್ತು ಎಲ್ಲರಿಗೂ ವ್ಯಾಕ್ಸಿನ್ ನೀಡಲು ಪ್ರಾರಂಭಿಸಿದ್ವಿ.
- ದೇಶದಲ್ಲಿ ನಮಗೆ ಕಡಿಮೆ ವ್ಯಾಕ್ಸಿನ್ ತಯಾರಿಸುವ ವಿಶ್ವಾಸವಿತ್ತು.
- ಬರುವ ದೀಪಾವಳಿ ತನಕ ಉಚಿತ ಪಡಿತರ ವಿತರಣೆ
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ