November 24, 2024

Newsnap Kannada

The World at your finger tips!

venktesh murthy hassan

ಹಾಸನದ ಜನತಾ ಮಾಧ್ಯಮ ಸಂಪಾದಕ ವೆಂಕಟೇಶಮೂರ್ತಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ

Spread the love

ಹಾಸನದ ಜನತಾ ಮಾಧ್ಯಮ ಕನ್ನಡ ದಿನ ಪತ್ರಿಕೆ ಸಂಪಾದಕ ಆರ್.ಪಿ. ವೆಂಕಟೇಶಮೂರ್ತಿ ಅವರನ್ನು ಈ ಬಾರಿ ಖಾದ್ರಿ ಶಾಮಣ್ಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಈ ವಿಷಯವನ್ನು ಟ್ರಸ್ಟ್ ನ‌‌ ನಿರ್ದೇಶಕರಾದ ಹಿರಿಯ ಪತ್ರಕರ್ತ ಎಚ್ ಆರ್ ಶ್ರೀಶ, ಹಾಗೂ ಶ್ರೀಮತಿ ಸ್ಮಿತಾ ವೆಂಕಟೇಶ್ (ಖಾದ್ರಿ) ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.

ವೆಂಕಟೇಶ್ ಮೂರ್ತಿ ಪರಿಚಯ :

೧೯೭೭ ರಲ್ಲಿ ಹಾಸನದಿಂದ ಆರಂಭಗೊಂಡ ‘ಜನತಾಮಾಧ್ಯಮ’ ದಿನಪತ್ರಿಕೆಯ ಪಾಲುದಾರ ಮತ್ತು ಉಪಸಂಪಾದಕನಾಗಿ ಪತ್ರಿಕಾ ಕ್ಷೇತ್ರಕ್ಕೆ ಪ್ರವೇಶ

೧೯೭೮ರಲ್ಲಿ ಪತ್ರಿಕೆಯ ಸಂಪಾದಕ ಸಾಮಾಜಿಕ ಚಟುವಟಿಕೆ : ಎಪ್ಪತ್ತರ ದಶಕದಲ್ಲಿ ಲೋಕನಾಯಕ ಜಯಪ್ರಕಾಶ ನಾರಾಯಣ್ ಅವರ ನೇತೃತ್ವದಲ್ಲಿ ನಡೆದ ನವ ನಿರ‍್ಮಾಣ ಆಂದೋಲನದಲ್ಲಿ ಸಕ್ರಿಯ ಕಾರ‍್ಯಕರ್ತ.

೧೯೮೦ ರಲ್ಲಿ ಆರಂಭಗೊಂಡ ರೈತ ಆಂದೋಲನದಲ್ಲಿ ಸಕ್ರಿಯ ಕಾರ‍್ಯಕರ್ತ. ಹಾಸನ ಜಿಲ್ಲಾ ರೈತ ಸಂಘದ ಕಾರ್ಯದರ್ಶಿಯಾಗಿ ಸೇವೆ .

ಹಾಸನ ಜಿಲ್ಲಾ ಕರ‍್ಯನಿರತ ಪತ್ರಕರ್ತರ ಸಂಘದ ಕಾರ‍್ಯದರ್ಶಿ ಮತ್ತು ಅಧ್ಯಕ್ಷರಾಗಿಯೂ ಸೇವೆ. ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಮಾಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ಕಾರ‍್ಯದರ್ಶಿ.

೯೦ರ ದಶಕದಲ್ಲಿ ದೇಶಾದ್ಯಂತ ನಡೆದ ಸಾಕ್ಷರತಾ ಆಂದೋಲನದಲ್ಲಿ ಸಕ್ರಿಯ ಕಾರ್ಯಕರ್ತ. ಹಾಸನ ಜಿಲ್ಲಾ ಸಾಕ್ಷರತಾ ಸಮಿತಿಯ ಜಂಟಿ ಕಾರ‍್ಯದರ್ಶಿ- ಉಪಾಧ್ಯಕ್ಷ.
ಹಾಸನ ಜಿಲ್ಲಾ ಸಾಂಸ್ಕೃತಿಕ ವೇದಿಕೆಯ ಸ್ಥಾಪನೆಯಲ್ಲಿ ಪ್ರಮುಖಪಾತ್ರ, ಪರಿಸರ ಆಂದೋಲನದಲ್ಲಿ ಕಾರ್ಯಕರ್ತ.

ಪ್ರಶಸ್ತಿಗಳು:

  • ೨೦೦೨ ರಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ೨೦೦೭ ರಲ್ಲಿ ಜೀ ಕನ್ನಡವಾಹಿನಿ ಶ್ರೇಷ್ಠ ಮಾಧ್ಯಮ ಪ್ರಶಸ್ತಿ.
  • ೨೦೦೮ರಲ್ಲಿ ಶ್ರವಣಬೆಳಗೊಳ ಶ್ರೀ ಮಠದಿಂದ ರಾಜ್ಯಮಟ್ಟದ ಪತ್ರಿಕಾ ಪ್ರಶಸ್ತಿ.
  • ೨೦೧೦ ರಲ್ಲಿ ಹಾಸನ ಜಿಲ್ಲಾಡಳಿತದಿಂದ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಸನ್ಮಾನ.
    ಹಾಗೂ ೨೦೧೩ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
  • ೨೦೧೭ ಹಾಸನ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಯ ಚಟುವಟಿಕೆಗಳಿಗಾಗಿ ಸ್ಥಾಪನೆಗೊಂಡ ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ. ಹಾಲಿ ಪ್ರತಿಷ್ಠಾನದಲ್ಲಿ ಓರ್ವ ಟ್ರಸ್ಟಿ.
  • ಈ ಟ್ರಸ್ಟ್ ನೇತೃತ್ವದಲ್ಲಿ ಹಾಸನ ನಗರ ಹಾಗೂ ಸುತ್ತಮುತ್ತ ೧೪ ಕೆರೆಗಳು ಹಾಗೂ ೪೫ ಕಲ್ಯಾಣಿಗಳ ಪುನಶ್ಚೇತನ ಆಗಿದೆ. ೨೫ ಸಾವಿರಕ್ಕೂ ಅಧಿಕ ಗಿಡ ನೆಟ್ಟು ಪೋಷಿಸಲಾಗುತ್ತಿದೆ.
Copyright © All rights reserved Newsnap | Newsever by AF themes.
error: Content is protected !!