February 19, 2026

Newsnap Kannada

The World at your finger tips!

sucide

ಚಾಮರಾಜನಗರದಲ್ಲಿ ದುರಂತ: ಕೊರೋನಾ ಸೋಂಕಿಗೆ ಹೆದರಿ ಕುಟುಂಬದ ನಾಲ್ವರು ಆತ್ಮಹತ್ಯೆ

Spread the love

ಕೊರೋನಾ ಸೋಂಕಿಗೆ ಹೆದರಿದ ಒಂದೇ ಕುಟುಂಬದ ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದ ಎಚ್. ಮೂಕಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಮಹದೇವಪ್ಪ (46) ಪತ್ನಿ ಮಂಗಳಮ್ಮ ಹಾಗೂ ಮಕ್ಕಳಾದ ಜ್ಯೋತಿ , ಶೃತಿ ಅವರುಗಳೇ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.‌

ಮೊದಲು ಮಹದೇವಪ್ಪನಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ನಂತರ ಪತ್ನಿ ಮಕ್ಕಳಿಗೂ ಸೋಂಕು ತಗುಲಿದ ನಂತರ ಇಡೀ ಕುಟುಂಬ ಭೀಕರತೆ ಕಾಡಬಹುದು ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಬುಧವಾರ ಬೆಳಿಗ್ಗೆ ಮನೆಯಿಂದ ಯಾರೂ ಹೊರಗೆ ಬಾರದೇ ಹೋದಾಗ ಅಕ್ಕ ಪಕ್ಕದವರು ಕಿಟಿಕಿಯಲ್ಲಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡ ದೃಷ್ಯ ಕಂಡು ಬಂದಾಗ ಪೋಲಿಸರಿಗೆ ಮಾಹಿತಿ ನೀಡಿದರು.

error: Content is protected !!