ರಾಜ್ಯದಲ್ಲಿ ಸೋಮವಾರ ಕೊರೋನಾ ಸೋಂಕಿತರ ಪ್ರಮಾಣ ಭಾರಿ ಇಳಿಮುಖವಾಗಿದೆ. ಸೋಂಕಿತರ ಸಂಖ್ಯೆ 16,604 ಹಾಗೂ ಆಸ್ಪತ್ರೆಯಿಂದ 44,473 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 411 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿ 23,560 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 98,769 ಆರ್ಟಿಪಿಸಿಆರ್ ಟೆಸ್ಟ್ಗಳೂ ಸೇರಿದಂತೆ ಒಟ್ಟು 1,22,329 ಪರೀಕ್ಷೆಗಳನ್ನ ನಡೆಸಲಾಗಿದೆ.
ಈ ಪೈಕಿ ಇಂದು ಒಟ್ಟು 16,604 ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಈವರೆಗೆ ರಾಜ್ಯದಲ್ಲಿ ಸೋಂಕಿಗೊಳಗಾದವರ ಸಂಖ್ಯೆ 26,04,431ಕ್ಕೆ ಏರಿಕೆಯಾಗಿದೆ.
ಇಂದು 44,473 ಸೋಂಕಿತರು ಗುಣಮುಖರಾಗಿದ್ದು ಈವರೆಗೆ ಒಟ್ಟು 22,61,590 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆದಂತಾಗಿದೆ. ಇಂದು ಸೋಂಕಿನಿಂದ 411 ಮಂದಿ ಸಾವನ್ನಪ್ಪಿದ್ದು ಇಲ್ಲಿವರೆಗೆ 29,090 ಮಂದಿ ಸೋಂಕಿಗೆ ಬಲಿಯಾದಂತಾಗಿದೆ. ಸದ್ಯ ರಾಜ್ಯದಲ್ಲಿ 3,13,730 ಆ್ಯಕ್ಟಿವ್ ಕೇಸ್ಗಳಿವೆ.
ಬೆಂಗಳೂರು ನಗರದಲ್ಲಿ ಇಂದು 3,992 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. 242 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಮೈಸೂರು 1,171, ಹಾಸನ 1,162, ಬೆಳಗಾವಿ 910, ತುಮಕೂರು 806, ಮಂಡ್ಯ 753, ಚಿತ್ರದುರ್ಗ 731 ಮತ್ತು ದಕ್ಷಿಣ ಕನ್ನಡದಲ್ಲಿ 651 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.
- ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್
- ವಯನಾಡಿನ ನೂತನ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ
- ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ
- ಬಾರ್ ಲೈಸೆನ್ಸ್ಗೆ 20 ಲಕ್ಷ ಲಂಚದ ಬೇಡಿಕೆ – ಅಬಕಾರಿ ಡಿಸಿ ವಿರುದ್ಧ ಲೋಕಾಯುಕ್ತಕ್ಕೆ ದೂರು
- ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ