ಚಿಕ್ಕಬಳ್ಳಾಪುರ ನಗರದ ಮಹಾವಂಚಕಿ ಜೊತೆಗೆ ಕನ್ನಡ ಸಿನಿಮಾ ನಟನೊಬ್ಬ ಸೇರಿ ಸಿಕ್ಕ ಸಿಕ್ಕವರಿಗೆ ಕೋಟ್ಯಾಂತರ ರು ಪಂಗನಾಮ ಹಾಕಿದ ಪ್ರಕರಣ ದಾಖಲಾಗಿದೆ.
ಅರ್ಚನಾ ಎಂಬ ಮಹಿಳೆಯೇ ವಂಚನೆ ಜಾಲದ ರುವಾರಿ. ಈ ಪ್ರಕರಣ ದಲ್ಲಿ ಸ್ಯಾಂಡಲ್ವುಡ್ ನಟ ಶಂಕರ್ 2ನೇ ಆರೋಪಿ. ಈತ ಅರ್ಚನಾಳ ಪ್ರಿಯಕರ ಕೂಡ ಹೌದು ಎನ್ನಲಾಗಿದೆ.
ಇವರ ಜತೆಗೆ ಅರ್ಚನಾ ಸಹೋದರ ಹರೀಶ್ ಮತ್ತು ಶ್ರೀಪತಿ 3 ಮತ್ತು 4ನೇ ಆರೋಪಿಗಳಾಗಿದ್ದಾರೆ. ಈ ನಾಲ್ವರು ಸೇರಿ ಮಾಡಿದ ಮಹಾವಂಚನೆಯಿಂದ ಜನ ಮೋಸ ಹೋಗಿದ್ದಾರೆ.
ಬೆಂಗಳೂರು, ಹೈದರಬಾದ್, ಮುಂಬೈನಲ್ಲಿ ಅರ್ಚನಾ ತನ್ನ ವಂಚನೆಯ ಬಲೆಯನ್ನು ಬೀಸಿದ್ದಳು. ನನ್ನ ಬಳಿ ರೈಸ್ ಪುಲ್ಲಿಂಗ್ ಚೆಂಬು ಇತ್ತು. ಅದನ್ನು ವಿದೇಶದ ವ್ಯಕ್ತಿಗೆ ಮಾರಾಟ ಮಾಡಿದ್ದೇನೆ. ಇದರಿಂದ, 6 ಲಕ್ಷ 36 ಸಾವಿರ ಕೋಟಿ ರು ಆದಾಯ ಬಂದಿದೆ. ಆರ್ಬಿಐ ಮೂಲಕ ಈ ಹಣ ಪಡೆಯಲು 240 ಕೋಟಿ ರು. ತೆರಿಗೆ ಕಟ್ಟಬೇಕು. ಟ್ಯಾಕ್ಸ್ ಕಟ್ಟಲು ಹಣವಿಲ್ಲ. ನೀವು ಕೊಟ್ಟರೆ ತೆರಿಗೆ ಪಾವತಿಸಿ ಆರ್ಬಿಐ ನಿಂದ ಎಲ್ಲಾ ಹಣವನ್ನೂ ಪಡೆಯುವೆ. ಆ ಕೂಡಲೇ ನಿಮ್ಮ ಹಣವನ್ನು ವಾಪಸ್ ಮಾಡುವೆ ಎಂದು ಕಥೆ ಹೇಳಿ ಹಲವರ ಬಳಿ ಕೋಟಿ ಕೋಟಿ ಹಣ ಪೀಕಿದ್ದಾಳೆ.
ಅದೇ ರೀತಿ ಬೆಂಗಳೂರು ಮೂಲದ ಉದ್ಯಮಿ ವಂಶಿಕೃಷ್ಣ ಬಳಿ 2.2.ಕೋಟಿ ಹಣ ಪಡೆದು ಕೈ ಎತ್ತಿದ್ದಾಳೆ ಎಂದು ವಂಶಿಕೃಷ್ಣ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಅರ್ಚನಾಳ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಅರ್ಚನಾ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸ್ಯಾಂಡಲ್ವುಡ್ ನಟ ಶಂಕರ್ ಸಾಥ್ ಕೊಟ್ಟಿದ್ದ ಎಂಬ ಆರೋಪ ಕೇಳಿಬಂದಿದೆ. ಶಂಕರ್ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಅರ್ಚನಾಗೂ ಶಂಕರ್ ನಡುವೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ