ಚಾಮರಾಜನಗರದಲ್ಲಿ ಸೋಮವಾರ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಮೃತಪಟ್ಟ ಬೆನ್ನಲ್ಲೇ ಇದೀಗ ಮಂಡ್ಯದ ನಾಗಮಂಗಲದಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.
ಮಂಡ್ಯದ ಹಾಲಹಳ್ಳಿಯ ನಿವಾಸಿ ಧನಂಜಯ್(45) ನಾಗಮಂಗಲ ತಾಲ್ಲೂಕು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಧನಂಜಯ್ ಅವರಿಗೆ ಇತ್ತೀಚೆಗಷ್ಟೇ ಕೊವಿಡ್ 19 ಧೃಡಪಟ್ಟಿತ್ತು. ಹೀಗಾಗಿ ವೈದ್ಯರ ಸೂಚನೆಯಂತೆ ಹೋಮ್ ಕ್ವಾರಂಟೈನ್‍ನಲ್ಲಿದ್ದರು. ಆಗ ಉಸಿರಾಟದ ಸಮಸ್ಯೆ ಉಲ್ಬಣಗೊಂಡಿತು.
ಮಿಮ್ಸ್ ನಲ್ಲಿ ಬೆಡ್ ಸಿಗದ ಕಾರಣ ಧನಂಜಯ್ ಕೀಲಾರ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮತ್ತೆ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ನಾಗಮಂಗಲ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸರಿಯಾದ ಸಮಯಕ್ಕೆ ಧನಂಜಯ್ ಅವರಿಗೆ ಆಕ್ಸಿಜನ್ ಹಾಗೂ ಬೆಡ್ ಸಿಗದೆ ನರಳಿ ಸಾವನ್ನಪ್ಪಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಸಪ್ತಪದಿ ತುಳಿದ ಮೂರೇ ದಿನದಲ್ಲಿ ಹೃದಯಾಘಾತದಿಂದ ನವವಿವಾಹಿತ ಅಕಾಲಿಕ ಸಾವು
ಏ.7 ಕ್ಕೆ ಮೇಲುಕೋಟೆ ವೈರಮುಡಿ ಉತ್ಸವ
ಮಂಡ್ಯದಲ್ಲಿ ಭೀಕರ ಅಪಘಾತ: ಸಾಫ್ಟ್ವೇರ್ ಇಂಜಿನಿಯರ್ ದಾರುಣ ಸಾವು