March 13, 2026

Newsnap Kannada

The World at your finger tips!

sucide

ಸೋಂಕಿನಿಂದ ಬಳಲಿದ ಪತಿಯ ಸಂಕಟ ನೋಡಲಾರದೇ ಪತ್ನಿ ಆತ್ಮಹತ್ಯೆ

Spread the love

ಕೊರೊನಾ ಸೋಂಕಿತೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ತಾಲೂಕು ದೇಶಿಗೌಡನಪುರದಲ್ಲಿ ಜರುಗಿದೆ.‌

ಶಿವಮ್ಮ(65) ಆತ್ಮಹತ್ಯೆ ಮಾಡಿಕೊಂಡ ಸೋಂಕಿತೆ.

ಪತಿ ಹಾಗೂ ಪತ್ನಿ ಇಬ್ಬರಿಗೂ ಪಾಸಿಟಿವ್ ಬಂದಿತ್ತು. ಪತಿಗೆ ಉಸಿರಾಟದ ಸಮಸ್ಯೆ ಜಾಸ್ತಿ ಇತ್ತು. ಹಾಗಾಗಿ ಚಾಮರಾಜನಗರ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಪತ್ನಿ ಶಿವಮ್ಮಳಿಗೆ ರೋಗ ಲಕ್ಷಣ ಇಲ್ಲದ ಕಾರಣ ಹೋಂ ಐಸೋಲೇಷನ್ ಗೆ ಕಳುಹಿಸಲಾಗಿತ್ತು. ಪತಿ ಸೋಂಕಿನಿಂದ ನರಳಾಡುವುದನ್ನು ಸಹಿಸದ ಪತ್ನಿ ಶಿವಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಚಾಮರಾಜನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡುತ್ತಿದ್ದಾರೆ.

error: Content is protected !!