February 24, 2026

Newsnap Kannada

The World at your finger tips!

blood

ಅತ್ತೆ, ಗರ್ಭಿಣಿ ಪತ್ನಿ, ಇಬ್ಬರು ಮಕ್ಕಳನ್ನು ಭೀಕರವಾಗಿ ಕೊಂದ ಕುಡುಕ..!

Spread the love

ಮದ್ಯವ್ಯಸನಿಯೊಬ್ಬ ತನ್ನ ಅತ್ತೆ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಭೀಕರ ವಾಗಿ ಕೊಲೆಗೈದ ಘಟನೆ ಮೈಸೂರು ಜಿಲ್ಲೆಯ ಸರಗೂರಿನಲ್ಲಿ ಜರುಗಿದೆ.

ಸರಗೂರು ತಾಲೂಕಿನ ಚಾಮೇಗೌಡನ ಹುಂಡಿಯಲ್ಲಿ ಈ ಘಟನೆಯಲ್ಲಿ ಅತ್ತೆ ಕೆಂಪಾಜಮ್ಮ (60), ಗರ್ಭಿಣಿ ಪತ್ನಿ ಗಂಗಾ(28), ಇಬ್ಬರು ಗಂಡು ಮಕ್ಳಳಾದ ರೋಹಿತ್ (4) ಮತ್ತು ಸಾಮ್ರಾಟ್ (2) ಕೊಲೆಯಾದ ದುರ್ದೈವಿಗಳು.

ಈ ನಾಲ್ವರನ್ನೂ ಆರೋಪಿ ಮಣಿಕಂಠಸ್ವಾಮಿ ಕೊಲೆ ಮಾಡಿದ್ದಾನೆ.

ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಕೃತ್ಯವೆಸಗಿದ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

ಘಟನಾ ಸ್ಥಳಕ್ಕೆ ಸರಗೂರು ಪಿಎಸ್‍ಐ ದಿವ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರಗೂರು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!