February 23, 2026

Newsnap Kannada

The World at your finger tips!

jarakihole

ಸಿಡಿ ಪ್ರಕರಣ – ಇಂದಿನ ಎಸ್ ಐಟಿ ವಿಚಾರಣೆಗೆ ರಮೇಶ್ ಜಾರಕಿಹೊಳಿ ಬರುತ್ತಿಲ್ಲ ?

Spread the love

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಂಜೆ 4 ಗಂಟೆಗೆ ಬರಬೇಕಿದ್ದ ಶಾಸಕ ರಮೇಶ್ ಜಾರಕಿಹೊಳಿ ವಿಚಾರಣೆಗೆ ಗೈರಾಗಲಿದ್ದಾರೆ.

ಕೊರೊನಾ ನೆಗೆಟಿವ್ ಬಂದರೂ ಶಾಸಕರು ಗೋಕಾಕ ನಿವಾಸದಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಹೊರಗಡೆ ಓಡಾಡದಂತೆ ಹಾಗೂ ದೂರದ ಊರುಗಳಿಗೆ ಪ್ರಯಾಣ ಮಾಡದಂತೆತಾಲೂಕು ವೈದ್ಯಾಧೀಕಾರಿಗಳು ಸೂಚನೆ ನೀಡಿದ್ದಾರೆ.

ಏಪ್ರಿಲ್ 1ರಂದು ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ಧೃಡವಾಗಿತ್ತು. ಏಪ್ರಿಲ್ 4ರಂದು ರಾತ್ರಿ 10.30ಕ್ಕೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಜಾರಕಿಹೊಳಿ ಗೋಕಾಕ್ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಬಿಪಿ, ಶುಗರ್ ಜಾಸ್ತಿಯಾಗಿದ್ದರಿಂದ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಏಪ್ರಿಲ್ 7ರಂದು ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

error: Content is protected !!