February 24, 2026

Newsnap Kannada

The World at your finger tips!

sunethra

ಕೊರೊನಾ ಇಲ್ಲ ಅಂದವರ ಕಪಾಳಕ್ಕೆ ಎರಡು ಬಾರಿಸಿ: ನಟಿ ಸುನೇತ್ರಾ ಪಂಡಿತ್

Spread the love

ಯಾರು ಕೊರೊನಾ ಇಲ್ಲ ಅಂತ ಬೇಜಬ್ದಾರಿತನ ತೋರಿಸುತ್ತಾರೋ ಅವರ ಕಪಾಳಕ್ಕೆ ಎರಡು ಬಾರಿಸಿ ಎಂದು ನಟಿ ಸುನೇತ್ರಾ ಪಂಡಿತ್ ಕರೆ ನೀಡಿದ್ದಾರೆ.

ಬೆಂಗಳೂರಿನ ಸುಮ್ಮನಳ್ಳಿ ಚಿತಾಗಾರ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸುನೇತ್ರ, ನಮ್ಮಕ್ಕ ಕೋವಿಡ್ ನಿಂದ ತೀರಿ ಹೋದ್ರು. ಒಂದು ದಿನ ನಿರ್ಲಕ್ಷ್ಯ ಹಾಗೂ ತಪ್ಪು ಮಾರ್ಗದರ್ಶನ ಅಕೆಯ ಸಾವು ಆಯಿತು ಅಂತ ಹೇಳೋಕೆ ನಾನು ಬಯಸಲ್ಲ. ಆದರೆ ಅದೂ ಒಂದು ಕಾರಣ ಎಂದು ಹೇಳಿದರು.

ಡಯಾಬಿಟಿಸ್ ಯಾರಿಗೆ ಇಲ್ಲ ಹೇಳಿ, ಪ್ರತಿಯೊಬ್ಬರಿಗೂ ಇದೆ. ಅದು ಎಲ್ಲರಿಗೂ ಗೊತ್ತಿರುವ ಸತ್ಯ. ದಯವಿಟ್ಟು ಬಿಬಿಎಂಪಿ ಒಂದು ಬೆಡ್ ಅಲರ್ಟ್ ಮಾಡುವಾಗ ಐಸಿಯು ಇರೋ ಆಸ್ಪತ್ರೆಗೆ ಅಲರ್ಟ್ ಮಾಡಿ ಎಂದು ಕಣ್ಣೀರು ಇಡುತ್ತಲೇ ಮನವಿ ಮಾಡಿಕೊಂಡರು.

error: Content is protected !!