ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರನ್ನು ಎಸ್‍ಐಟಿಯವರು ವಿಚಾರಣೆ ಮಾಡಬೇಕು ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಒತ್ತಾಯಿಸಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಷ, ಸಿಡಿ ಜಾಲವನ್ನು ಅಲ್ಲಿ ಇಲ್ಲಿ ಹುಡುಕಾಡುವ ಬದಲಾಗಿ ಕುಮಾರಸ್ವಾಮಿಯವರೇ ಹೇಳಿದ್ದಾರಲ್ಲ, ನನಗೆ ಐದು ಕೋಟಿ ಡೀಲ್ ಮಾಡಿರೋದು ಗೊತ್ತಿದೆ ಅಂತ. ಆ ಮಹಾನಾಯಕ ಯಾರೆಂದು ಗೊತ್ತಿದೆ ಅಂತ ಅವರೇ ಹೇಳಿದ್ಮೇಲೆ ಎಸ್ ಐಟಿಯವರು ಕುಮಾರಸ್ವಾಮಿ ಹೇಳಿಕೆ ತೆಗೆದುಕೊಳ್ಳಬೇಕು. ತನಿಖೆಗೆ ಸಹಕಾರ ಕೊಟ್ರು ಅನ್ನುವ ಕೀರ್ತಿ ಕುಮಾರಸ್ವಾಮಿಗೆ ಸಿಗುತ್ತೆ ಎಂದರು.
ವಿಜಯೇಂದ್ರ ಮಾಹಾ ನಾಯಕ :
ಸಿಎಂ ಪುತ್ರ ವಿಜಯೇಂದ್ರರರೇ ಆ ಮಹಾನಾಯಕ. ರಾಜ್ಯದಲ್ಲಿ ಸಿಎಂ ಹೊರತುಪಡಿಸಿದರೆ ಮಹಾನಾಯಕ ಯಾರು..? ಸಿಎಂ ಪುತ್ರ ವಿಜಯೇಂದ್ರರೇ ಆ ಮಹಾನಾಯಕ ಇರಬಹುದು ಎಂದು ಭವಿಷ್ಯ ಹೇಳಿದರು.
ಸಿಡಿ ಅಪ್ ಲೋಡ್ ಆಗುವ ಎರಡು ದಿನ ಮುಂಚೆ ಮಹಾರಾಷ್ಟ್ರ ಮಾಜಿ ಸಿಎಂ ಫಡ್ನವಿಸ್ ಅವರು ಜಾರಕಿಹೊಳಿಗೆ ಫೋನ್ ಮಾಡಿ ತಿಳಿಸಿದರು. ನಾಳೆ ನಾಡಿದ್ದು ಸಿಡಿ ಅಪ್ಲೋಡ್ ಆಗುತ್ತೆ ಅಂತ ಫೋನ್ ಮಾಡಿ ತಿಳಿಸಿದ್ದಾರೆ. ಹಿಂಗೆಲ್ಲಾ ಸಿಡಿ ಅಪ್ಲೋಡ್ ಮಾಡ್ತಾರೆ ಬೇಜಾರ್ ಮಾಡ್ಕೋಬೇಡ ನಿಮ್ಮ ಜೊತೆ ನಾವೆಲ್ಲಾ ಇರ್ತಿವಿ ಬೇಜಾರ್ ಮಾಡ್ಕೋಬೇಡ ಅಂತ ಫಡ್ನವೀಸ್ ಹೇಳಿದ್ದಾರೆ. ನನಗೆ ಒಂದು ಆಶ್ಚರ್ಯ ಅಂದ್ರೆ ಮಹಾರಾಷ್ಟ್ರದ ಮಾಜಿ ಸಿಎಂಗೆ ಮಾಹಿತಿ ಇರುತ್ತೆ. ನಮ್ಮಲ್ಲಿರುವ ಇಂಟೆಲಿಜೆನ್ಸ್ ಕತ್ತೆ ಕಾಯ್ತಾರಾ? ಎಂದು ರಾಜಣ್ಣ ಕಿಡಿಕಾರಿದರು.
- ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
- ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
- ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!
- ಮಾದಕ ವಸ್ತುಗಳ ಅಕ್ರಮ ಮಾರಾಟ: ಮೂವರು ಆರೋಪಿಗಳು ಬಂಧನ
- ಕೆನಡಾವನ್ನು ಅಮೆರಿಕಾದ 51ನೇ ರಾಜ್ಯವನ್ನಾಗಿ ಮಾಡಲು ಟ್ರಂಪ್ ಆರ್ಥಿಕ ಒತ್ತಡದ ಬೆದರಿಕೆ
More Stories
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ