February 22, 2026

Newsnap Kannada

The World at your finger tips!

acb 1

ಬೆಳಗಾವಿ ಸ್ಮಾರ್ಟ್ ಸಿಟಿ ಅಭಿಯಂತರ ಎಸಿಬಿ ಬಲೆಗೆ: ಮನೆ ಶೋಧ ಕಾರ್ಯದಲ್ಲಿ 23.56 ಲಕ್ಷ ರು ಪತ್ತೆ

Spread the love

ಕಾಮಗಾರಿ ಮಾಡಿದ್ದ ಗುತ್ತಿಗೆ‌ದಾರನಿಗೆ ಬಿಲ್ ಪಾಸ್ ಮಾಡಲು 60 ಸಾವಿರ ರು ಲಂಚ ಪಡೆಯುತ್ತಿದ್ದಾಗ ಬೆಳಗಾವಿ ಸ್ಮಾರ್ಟ್ ಸಿಟಿ ಟೆಕ್ನಿಕಲ್ ಎಂಜನೀಯರ್ ಸಿದ್ದನಾಯ್ಕ್ ಎಸಿಬಿ ಬಲೆಗೆ ಸಿಕ್ಕಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಯಿಂದ ಬೆಳಗಾವಿ ನಗರದಲ್ಲಿ ನಿರ್ಮಿಸಲಾಗುತ್ತಿರುವ ಬಸ್ ನಿಲ್ದಾಣದ ಕಾಮಗಾರಿಯ ಬಿಲ್ ಪಾಸ್ ಮಾಡಲು ಶೇ.0.5ರಷ್ಟು ಅಂದರೆ, 60 ಸಾವಿರ ರು ಲಂಚ ಕೇಳಿದ್ದರು.

60 ಸಾವಿರ ರುಗಳನ್ನು ತಮ್ಮ ಮನೆಯಲ್ಲಿ ಸ್ವೀಕರಿಸುತ್ತಿದ್ದಾಗ ಗುರುವಾರ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಅಪೂರ್ವ ಕಂಪನಿ ಮ್ಯಾನೇಜರ್ ಬೆಳಗಾವಿ ಗಣೇಶ ನಗರದ ಸಂಜೀವ ಕುಮಾರ ನವಲಗುಂದ ದೂರು ಸಲ್ಲಿಸಿದ್ದರು.

ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಸಿಟಿ ಬಸ್ ನಿಲ್ದಾಣ ನಿರ್ಮಾಣ ಮಾಡುತ್ತಿದ್ದಾರೆ. ಇದರ ಬಿಲ್ ಅನುಮೋದನೆಗೆ ಸಿದ್ದನಾಯ್ಕ್ ಲಂಚ ಕೇಳಿದ್ದರು.

ಸಿದ್ದನಾಯ್ಕ್ ಮನೆಯನ್ನು ಶೋಧ ನಡೆಸಿದಾಗ 23.56 ಲಕ್ಷ ರೂ. ಪತ್ತೆಯಾಗಿದೆ.ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.

ಎದಿಬಿಎಸ್ಪಿ ಬಿಎಸ್ ನ್ಯಾಮಗೌಡ, ಮಾರ್ಗದರ್ಶನದಲ್ಲಿ ಜೆ.ಎಮ್.ಕರುಣಾಕರ ಶೆಟ್ಟಿ ಪೊಲೀಸ್ ಉಪಾಧೀಕ್ಷಕರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎ.ಎಸ್ ಗುದಿಗೊಪ್ಪ, ಇನ್ಸ್ ಪೆಕ್ಟರ್, ಹಾಗೂ ಹೆಚ್ ಸುನೀಲ್ ಕುಮಾರ, ಪೊಲೀಸ್ ಇನ್ಸ್‌ಪೆಕ್ಟರ್, ಮತ್ತು ಬೆಳಗಾವಿ ಎಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.

error: Content is protected !!