ನ್ಯೂಸ್ ಸ್ನ್ಯಾಪ್.
ಬೆಂಗಳೂರು.
ಕೃಷಿಕರೊಬ್ಬರಿಗೆ ಅಡಕೆ ಮಾರಾಟದಿಂದ ಬಂದಿದ್ದ 26. 5 ಲಕ್ಷ ರು ಗಳನ್ನು ಪೊಲೀಸ್ ಎಸ್ ಐ ಹಾಗೂ ತಂಡ ದರೋಡೆ ಮಾಡಿದ ನಂತರ 6 ಲಕ್ಷ ರು ಲಂಚ ಪಡೆದು ಆರೋಪಿಗಳಿಗೆ ನೆರವಾದ ಎಸ್ ಜೆ ಪಾರ್ಕ್ ಇನ್ಸ್ ಪೆಕ್ಟರ್ ಯೋಗೀಶ್ ಅವರನ್ನು ಪೊಲೀಸ್ ಆಯುಕ್ತ ಅಮಾನತ್ತು ಮಾಡಿದ್ದಾರೆ. ಆರೋಪಿ ಸ್ಥಾನದಲ್ಲಿರುವ ಯೋಗಿಶ್ ಈಗ ಪರಾರಿಯಾಗಿದ್ದಾರೆ.
ದರೋಡೆ ಮಾಡಿದ ಹಣದಲ್ಲಿ ಸಬ್ ಇನ್ಸ್ ಪೆಕ್ಟರ್ ಜೀವನ್ ಕುಮಾರ್ ಹಾಗೂ ತಂಡವು ವೃತ್ತ ನಿರೀಕ್ಷಕ ಯೋಗಿಶ್ ಕೂಡ 6 ಲಕ್ಷ ರು ಪಾಲು ನೀಡಿದೆ. ದರೋಡೆಕೋರ ಎಸ್ ಐ ಜೀವನ್ ಕುಮಾರ್ ಈ ಮಾಹಿತಿ ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಕೆ. ಆರ್. ಮಾರುಕಟ್ಟೆಯ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಸಲ್ಲಿಸಿದ ಪ್ರಾಥಮಿಕ ವರದಿಯ ಆಧಾರದ ಮೇಲೆ ಯೋಗಿಶ್ ಅವರನ್ನು ಅಮಾನತ್ತು ಮಾಡಲಾಗಿದೆ.
ಆ. 19 ರಂದು ತುಮಕೂರಿನ ತೆಂಗು – ಅಡಿಕೆ ವ್ಯಾಪಾರಿ ಮೋಹನ್ ಅವರಿಗೆ ಚಿಕ್ಕಪೇಟೆ ಅಂಗಡಿಯೊಂದರಲ್ಲಿ 26.5 ಲಕ್ಷ ರು ಬಾಕಿ ಕೊಡುವುದಿತ್ತು. ಈ ಹಣ ವಸೂಲಿ ಮಾಡಿಕೊಂಡು ಬರುವಂತೆ ಮಾಲೀಕ ಮೋಹನ್, ಕೆಲಸಗಾರಿಗೆ ಸೂಚಿಸಿದರು. ಅದರಂತೆ ಕೆಲಸಗಾರರು ಹಣ ಪಡೆದು ಕಾರಿನಲ್ಲಿ ಹಿಂತಿರುಗುವಾಗ ಎಸ್.ಜೆ.ಪಾರ್ಕ್ ಎಸ್ ಐ ಜೀವನ್ ಕುಮಾರ್, ಜ್ಞಾನ ಪ್ರಕಾಶ್ ತಮಡ ಅವರುಗಳು ಕಾರು ಅಡ್ಡಗಟ್ಟಿ 26 ಲಕ್ಷ ರು ಗಳನ್ನು ದರೋಡೆ ಮಾಡಿದ್ದರು. ನಂತರ ವ್ಯಾಪಾರಿ ಮೋಹನ್ ಹಣ ದರೋಡೆಯಾಗಿದೆ ಎಂದು ಕೆ ಆರ್ ಮಾರುಕಟ್ಟೆ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣದ ವಿಚಾರಣೆ ಮಾಡಿದ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದ್ದರು. ಈ ವಿಚಾರಣೆಯ ವೇಳೆ ಇನ್ಸ್ ಪೆಕ್ಟರ್ ಯೋಗಿಶ್ ಕೂಡ 6 ಲಕ್ಷ ರುಗಳನ್ನು ನೀಡಿರುವುದಾಗಿ ಜೀವನ್ ಕುಮಾರ್ ಬಾಯಿ ಬಿಟ್ಟಿದ್ದಾರೆ. ಹೀಗಾಗಿ ಪೊಲೀಸ್ ಆಯುಕ್ತರು ಯೋಗಿಶ್ನನ್ನು ಅಮಾನತ್ತು ಮಾಡಿದರು. ಆರೋಪಿ ಯೋಗಿಶ್ ಪರಾರಿಯಾಗಿದ್ದಾರೆ. ಹುಡುಕಾಟ ನಡೆದಿದೆ.
More Stories
ಬೆಂಗಳೂರು-ಮೈಸೂರು ರೈಲು ಸಂಚಾರ ವಿಳಂಬ
ಬೆಂಗಳೂರಿನ 83 ವರ್ಷದ ವೃದ್ಧೆಗೆ 1.24 ಕೋಟಿ ರೂ. ವಂಚನೆ
ಎಸ್ಬಿಐಯಲ್ಲಿ 13,735 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ