February 20, 2026

Newsnap Kannada

The World at your finger tips!

basakar gowda

ಶ್ರೀರಂಗಪಟ್ಟಣ ಕಾಂಗ್ರೆಸ್ ಮುಖಂಡ ಭಾಸ್ಕರ್ ಗೌಡ ನಿಧನ

Spread the love

ಶ್ರೀರಂಗಪಟ್ಟಣ ಕಾಂಗ್ರೆಸ್ ಮುಖಂಡ, ಮೈಸೂರಿನ ಉದ್ಯಮಿ ಎಂ. ಭಾಸ್ಕರ್ ಗೌಡ (ಅಂಬರೀಶ್ ಗೌಡ) ಭಾನುವಾರ ರಕ್ತದೊತ್ತಡ ತೀವ್ರವಾಗಿ ಕುಸಿದು ಅಕಾಲಿಕ ನಿಧನರಾದರು.

ಮೈಸೂರಿನ ಸಿದ್ದಾರ್ಥ ನಗರದ ನಿವಾಸಿಯಾಗಿದ್ದ ಭಾಸ್ಕರ್ ಗೌಡರಿಗೆ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ಶೀಘ್ರ ಜೆಎಸ್ ಎಸ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ನಿಧನರಾದರು.‌

ಮೃತರ ಸ್ವಗ್ರಾಮ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲಕ್ಕೆ ಮೃತ ದೇಹ ತರಲಾಗಿದೆ.

ಅಂತ್ಯಕ್ರಿಯೆ ನಾಳೆ (ಸೋಮವಾರ) ಗ್ರಾಮದ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮೃತರು ತಾಯಿ ಸತ್ಯಮ್ಮ, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಮೂವರು ಸಹೋದರರು ಹಾಗೂ ಕುಟುಂಬ ಸೇರಿದಂತೆ ಅಪಾರ ಬಳಗವನ್ನು ಭಾಸ್ಕರ್ ಗೌಡ ಅಗಲಿದ್ದಾರೆ.

error: Content is protected !!