February 20, 2026

Newsnap Kannada

The World at your finger tips!

ashok jayaram

ಅಶೋಕ್ ಜಯರಾಂ ಬಿಜೆಪಿಗೆ ಸೇರ್ಪಡೆ ? ಭರದ ಸಿದ್ದತೆ , ಮಾತುಕತೆ

Spread the love

ಮಾಜಿ ಸಚಿವ ದಿ. ಎಸ್ ಡಿ ಜಯರಾಂ ಪುತ್ರ ಅಶೋಕ್ ಜಯರಾಂ ಜೆಡಿಎಸ್ ಗೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರ್ಪಡೆ ಯಾಗಲು ತುದಿಗಾಲಿನಲ್ಲಿ ನಿಂತಿದ್ದಾರೆಂದು ಗೊತ್ತಾಗಿದೆ.

ashok jaya

ಮೂಲಗಳ ಪ್ರಕಾರ ಅಶೋಕ್ ಜಯರಾಂ ಈಗಾಗಲೇ ಬಿಜೆಪಿ ಅಂಗಳದಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿರುವುದು ಈ ಅನುಮಾನಕ್ಕೆ ಪುಷ್ಠಿ ನೀಡಿದೆ.

ashok ja

ಇದಕ್ಕೆ ಸಾಕ್ಚಿ ಎಂಬಂತೆ ಭಾನುವಾರ ಮಂಡ್ಯ ಎಸಿ ಮಾದೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಜಿಲ್ಲಾ ವಿಶೇಷ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಅಶೋಕ್ ಜಯರಾಂ , ಬಿಜೆಪಿ ಜಿಲ್ಲಾ ಉಸ್ತುವಾರಿ , ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಇತರ ಜಿಲ್ಲಾ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡು ಸಭೆಯಲ್ಲಿ ಭಾಗವಹಿಸಿದ್ದು ಬಿಜೆಪಿ ಸೇರ್ಪಡೆಯನ್ನು ಖಚಿತಪಡಿಸುತ್ತಿದೆ.‌

ಈ ನಡುವೆ ಬಿಜೆಪಿಗೆ ಜಿಲ್ಲೆಯ ಬಹುತೇಕ ಕಾಂಗ್ರೆಸ್ , ಜೆಡಿಎಸ್ ನ ಬಹುತೇಕ ನಾಯಕರು ಸೇರ್ಪಡೆಯಾಗಲು ಸಿದ್ದರಾಗಿದ್ದಾರೆ. ಅಶೋಕ್ ಜಯರಾಂ ಬಿಜೆಪಿ ಸೇರ್ಪಡೆ ಸೇರುವ ಸಂಬಂಧ ಬಿರುಸಿನ ಮಾತುಕತೆಗಳು ಆರಂಭವಾಗಿವೆ. ಸಧ್ಯದಲ್ಲೇ ಸೇರ್ಪಡೆ ದಿನಾಂಕ ಕೂಡ ನಿರ್ಧಾರವಾಗಲಿದೆ ಎಂದು ಮೂಲಗಳು ಹೇಳಿವೆ.

error: Content is protected !!