ನ್ಯೂಸ್ ಸ್ನ್ಯಾಪ್.
ದೆಹಲಿ.
ಸುಪ್ರೀಂ ಕೋರ್ಟ್ ನ ನಿಂದನೆ ಹಾಗೂ ಮುಖ್ಯ ನ್ಯಾಯಾಧೀಶ ಎಸ್.ಎ. ಬೊಬ್ಡೆ ವಿರುದ್ಧ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರನ್ನು ನ್ಯಾಯಾಂಗ ನಿಂದನೆ ಆರೋಪದಡಿ, ಸುಪ್ರೀಂ ಕೋರ್ಟ್ ಸಮುಚ್ಛಯದ ಅಪರಾಧಿ ನ್ಯಾಯಾಲಯವು ಭೂಷಣ್ ಅವರನ್ನು ತಪ್ಪಿತಸ್ಥ ಎಂದು ಪರಿಗಣಿಸಿ ಅವರಿಗೆ ಒಂದು ರೂಪಾಯಿ ದಂಡ ವಿಧಿಸಿರುವುದು ವಾಕ್ ಸ್ವಾತಂತ್ರ್ಯ ಕ್ಕೆ ಧಕ್ಕೆ ಎಂದು ಭಾವಿಸಿ ಮೇಲ್ಮನವಿ ಸಲ್ಲಿಸಿದ್ದಾರೆ.
ಭೂಷಣ್ ಹಾಗೂ ಅವರ ವಕೀಲೆ ಕಾಮಿನಿ ಜೈಸ್ವಾಲ್, ಮೇಲ್ಮನವಿ ಹಕ್ಕನ್ನು ಬಳಸಿಕೊಂಡು ನೂತನ ಪೀಠದಲ್ಲಿ ವಿಚಾರಣೆಯನ್ನು ಆರಂಭಿಸುವಂತೆ ಕೋರಿದ್ದಾರೆ.
ವಕೀಲೆ ಕಾಮಿನಿ ಜೈಸ್ವಾಲ್ ಅರ್ಜಿಯಲ್ಲಿ ‘ಮೇಲ್ಮನವಿ ಸಲ್ಲಿಸುವುದು ಸಂವಿಧಾನದತ್ತ ಮೂಲಭೂತ ಹಕ್ಕು ಹಾಗೂ ಅಂತರಾಷ್ಟ್ರೀಯ ಕಾನೂನು ನಿಯಮಗಳಲ್ಲೊಯೂ ಈ ಹಕ್ಕನ್ನು ಖಾತರಿಪಡಿಸಲಾಗಿದೆ. ಈ ಮೇಲ್ಮನವಿಗೆ ಒಪ್ಪಿಗೆ ನೀಡಿದರೆ ತಪ್ಪು ತೀರ್ಪಿನ ವಿರುದ್ಧ ಹೋರಾಡಲು ಶಸ್ತ್ರ ಸಿಕ್ಕಂತಾಗುತ್ತದೆ’ ಎಂದು ಹೇಳಿದ್ದಾರೆ.
ವಾಕ್ ಸ್ವಾತಂತ್ರ್ಯ, ಮೇಲ್ಮನವಿ ಸಲ್ಲಿಸುವ ಹಕ್ಕು, ಈ ಅಂಶಗಳನ್ನೂ ಸಹ ಅವರು ತಮ್ಮ ಅರ್ಜಿಯಲ್ಲಿ ಅಳವಡಿಸಿದ್ದಾರೆ.
ಈ ಎಲ್ಲಾ ಅಂಶಗಳ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಿರುವದರಿಂದ ವಾಕ್ ಸ್ವಾತಂತ್ರ್ಯದ ಚರ್ಚೆಗಳು ಮತ್ತೆ ಮುನ್ನೆಲೆಗೆ ಬರುವ ಸಂಭವವಿದೆ.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ