January 9, 2025

Newsnap Kannada

The World at your finger tips!

BASAVARAJ BOMMAYI

ನಂಗೆ ಖಾತೆ ಬದಲಿಸಿ: ಜಲಸಂಪನ್ಮೂಲ ಖಾತೆ ಕೊಡಿ‌ – ಲಾಬಿ‌ಗೆ ಮುಂದಾಗಿರುವ ಬೊಮ್ಮಾಯಿ

Spread the love

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ತೆರವಾಗಿರುವ ಜಲಸಂಪನ್ಮೂಲ ಖಾತೆ ಮೇಲೆ ಪ್ರಭಾವಿ ಸಚಿವ ಬಸವರಾಜ್ ಬೊಮ್ಮಾಯಿ ಕಣ್ಣಿಟ್ಟಿದ್ದಾರೆ.

ಈ ಖಾತೆ ಪಡೆಯಲು ಭಾರಿ ಲಾಬಿಗೆ ಮುಂದಾಗಿರುವ ಬೊಮ್ಮಾಯಿ ಅವರಿಗೆ ನೀರಾವರಿ ಖಾತೆ ಅಚ್ಚುಮೆಚ್ಚು. ಈ ಖಾತೆ ಬೇಕೆಂದು ತೆರೆಮರೆಯಲ್ಲಿ ಭಾರಿ ಪ್ರಯತ್ನ ಗಳು ಆರಂಭವಾಗಿವೆ.

ಈ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯರ ಮೂಲಕ ಸಿಎಂ ಯಡಿಯೂರಪ್ಪ ಮೇಲೆ ಒತ್ತಡ ಹಾಕುತ್ತಿದ್ದಾರೆ. ಆಲ್ಲದೇ ನನಗೆ ಖಾತೆ ಬದಲಾವಣೆ ಮಾಡಿ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ ಗೊತ್ತಾಗಿದೆ.

ಈ ಹಿಂದೆ ನಾನು ಕೇಳಿದ ಖಾತೆ ನೀಡಲಿಲ್ಲ. ಸಂಪುಟ ಪುನಾರಚನೆ ವೇಳೆಯೂ ಬಯಸಿದ ಖಾತೆ ಸಿಗಲಿಲ್ಲ. ಈಗಲಾದರೂ ಜಾರಕಿಹೊಳಿ ರಾಜೀನಾಮೆಯಿಂದ ತೆರವಾಗಿರುವ ಜಲಸಂಪನ್ಮೂಲ ಖಾತೆ ನೀಡಿ ಎಂದು ಬಸವರಾಜ್ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Copyright © All rights reserved Newsnap | Newsever by AF themes.
error: Content is protected !!