ಬೆಳಗಿನ ಬಿಸಿಲೇರಿದಂತೆ ಕನಸುಗಳ ಗೋಪುರ ಕಟ್ಟುತ್ತೇನೆ…..
ಸಂಜೆಯ ಇಳಿಗತ್ತಲಿನಲ್ಲಿ ಕನಸುಗಳ ಗೋಪುರ ಛಿದ್ರವಾಗುತ್ತದೆ…….
ಪ್ರತಿದಿನವೂ ಹೊಸ ಹೊಸ ಕನಸುಗಳು..ಪ್ರತಿ ರಾತ್ರಿಗಳು ನಿರಾಸೆಯ ನಿಟ್ಟುಸಿರು.
ಮಧ್ಯರಾತ್ರಿಗಳ ದಿಢೀರ್ ಎಚ್ಚರದಲ್ಲಿ ಹಿಂಸಾತ್ಮಕ ನರಳಾಟ….
ಬೆಳಗಿನ ಜಾವದ ಕೆಟ್ಟ ಕನಸುಗಳು…..
ಓಡುತ್ತಿದ್ದೇನೆ ಕನಸುಗಳ ಹಿಡಿಯಲು….
ಎಡವುತ್ತೇನೆ, ಬೀಳುತ್ತೇನೆ, ಚೀರುತ್ತೇನೆ ಕನಸುಗಳ ಹಿಡಿಯಲಾಗದೆ……
ಸುತ್ತಲೂ ನೋಡುತ್ತೇನೆ, ಯಾರಾದರೂ ಇದ್ದಾರೆಯೇ ಎಂದು….
ಕನಸುಗಳು ನನ್ನ ಸ್ವಂತದವು, ಪಾಪ ಅದಕ್ಕೆ ಯಾರ ಸಹಾಯವೂ ಸಾಕಾಗುವುದಿಲ್ಲ….
ಮತ್ತೆ ಏಳುತ್ತೇನೆ, ಸಮಾಧಾನ ಪಡಿಸಿಕೊಳ್ಳುತ್ತೇನೆ……
ಓಡುತ್ತೇನೆ, ನೋಯುತ್ತೇನೆ, ಕೋಪಗೊಳ್ಳುತ್ತೇನೆ, ನಿರಾಶನಾಗುತ್ತೇನೆ, ಕುಸಿಯುತ್ತೇನೆ….
ಮನಸ್ಸು ಕೇಳುವುದಿಲ್ಲ. ದೇಹದ ಆಯಾಸವನ್ನು ಲೆಕ್ಕಿಸದೆ ಮುನ್ನುಗ್ಗಲು ಪ್ರೇರೇಪಿಸುತ್ತದೆ…..
ಮತ್ತೆ ಚಿಗುರುತ್ತೇನೆ, ಬೆಳೆಯುತ್ತೇನೆ, ನಡೆಯುತ್ತೇನೆ, ಓಡುತ್ತೇನೆ, ಕೈ ಚಾಚುತ್ತೇನೆ……
ಕನಸುಗಳ ಹಿಡಿಯಲು……
ಕನಸುಗಳು ಸಿಗುವವರೆಗೂ,
ಅದನ್ನು ನಿಮಗೆ ತಲುಪಿಸುವವರೆಗೂ ಧಣಿವರಿಯದೆ ಓಡುತ್ತಲೇ ಇರುತ್ತೇನೆ….
ಆತ್ಮಸಾಕ್ಷಿಯಾಗಿ ಹೇಳುತ್ತೇನೆ…..
ಒಳಗೆ ಜ್ವಾಲಾಮುಖಿ ಹೊರಗೆ ಸಹನೆಯ ಮುಖವಾಡ ತೊಟ್ಟು,
ನಾನು ಹಿಡಿಯಲು ಹೊರಟಿರುವ ಕನಸುಗಳು…
ಪ್ರೀತಿಯ ಕನಸುಗಳು,
ಸ್ನೇಹದ ಕನಸುಗಳು,
ಸೌಹಾರ್ಧತೆಯ ಕನಸುಗಳು,
ಸಭ್ಯತೆಯ ಕನಸುಗಳು,
ಸಮಾನತೆಯ ಕನಸುಗಳು,
ಸ್ವಾಭಿಮಾನದ ಕನಸುಗಳು,
ಮಾನವೀಯತೆಯ ಕನಸುಗಳು,
ನೆಮ್ಮದಿಯ ಬದುಕಿಗಾಗಿ ಇರುವ ಮಾರ್ಗಗಳನ್ನು ಹುಡುಕುವಾ ಕನಸುಗಳು…….
ಅದು ನನಗಾಗಿಯಲ್ಲ, ನಿಮಗಾಗಿ,
ಈ ಸಮಾಜಕ್ಕಾಗಿ…..
ನಾನು ಬಯಸಿದ್ದು ಸಿಗಲಿಲ್ಲ.
ಇನ್ನು ಸಿಗುವ ಯಾವುದನ್ನೂ ಬಯಸುವುದಿಲ್ಲ….
ಕನಸುಗಳ ಹುಡುಕುವುದೇ ನನ್ನ ಕಾಯಕ….
ಸಿನಿಮಾ ಹಾಡೊಂದನ್ನು ಗುನುಗುತ್ತಾ ಮತ್ತೆ ಓಡುತ್ತೇನೆ…….
” ಗೆದ್ದೇ ಗೆಲ್ಲುವೆ ಒಂದು ದಿನ,
ಗೆಲ್ಲಲೇ ಬೇಕು ಒಳ್ಳೇತನ “
- ವಿವೇಕಾನಂದ. ಹೆಚ್.ಕೆ
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ