ಗಡಿನಾಡಿನ ಕನ್ನಡ ವಿದ್ಯಾರ್ಥಿಗಳಿಗೆ ಸಂಕಷ್ಟ – ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ

Team Newsnap
1 Min Read

ನ್ಯೂಸ್ ಸ್ನ್ಯಾಪ್
ರಾಯಚೂರು

ಕರ್ನಾಟಕ – ಆಂಧ್ರ ಗಡಿಯಲ್ಲಿನ‌ ವಿದ್ಯಾರ್ಥಿಗಳು ಅನೇಕ ರೀತಿಯ ಸಂಕಷ್ಟಗಳಿಗೆ ಈಡಾಗುತ್ತಿದ್ದಾರೆ.

ಕರ್ನಾಟಕ‌ ಸರ್ಕಾರವು ೨೦೧೧ರಲ್ಲೇ ಗಡಿಯಲ್ಲಿನ ೧೩ ಗ್ರಾಮಗಳನ್ನು ‘ಗಡಿನಾಡು’ ಎಂದು ಪಟ್ಟಿ ಮಾಡಿ ರಾಜ್ಯಪತ್ರವನ್ನೂ ಹೊರಡಿಸಿತ್ತು.
ಈಗ ಅಲ್ಲಿಯ‌ ವಿದ್ಯಾರ್ಥಿಗಳು ಭಾಷಾ ಸಮಸ್ಯೆ ಎದುರಿಸುವದರ ಜೊತೆಗೆ, ಸರ್ಕಾರಗಳಿಂದಲೂ ತಿರಸ್ಕೃತರಾಗುತ್ತಿದ್ದಾರೆ.

ಗಡಿನಾಡಿನ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯಲ್ಲಿಯೇ ಉನ್ನತ ಶಿಕ್ಷಣ ಪೂರೈಸುವ ಆಸೆಯಿದ್ದರೂ ಅದಕ್ಕೆ ಕೆಲವು ಪ್ರಮಾಣ ಪತ್ರಗಳ ಅವಶ್ಯಕತೆ ಇದೆ. ಇದಕ್ಕೆ ಕರ್ನಾಟಕ ಸರ್ಕಾರ ಯಾವುದೇ ಉತ್ತೇಜನ ನೀಡುತ್ತಿಲ್ಲ. ಕರ್ನಾಟಕದಲ್ಲಿನ ಶಾಲಾ ಕಾಲೇಜುಗಳು ಸ್ಥಳೀಯರಿಗೆ ಅವಕಾಶ ನೀಡುವದಕ್ಕೆ ತೋರಿಸುವಷ್ಟು ಉತ್ಸಾಹವನ್ನು ಗಡಿನಾಡ ವಿದ್ಯಾರ್ಥಿಗಳಿಗೆ ತೋರಿಸುತ್ತಿಲ್ಲ. ಅತ್ತ ಆಂಧ್ರದಲ್ಲಿ‌ಯೂ‌ ಸಹ ಇದೇ ಧೋರಣೆಯಿದೆ. ಹೀಗಾಗಿ ಅಲ್ಲಿನ ಮಕ್ಕಳುಎಸ್ಎಸ್ಎಲ್ ಸಿ ನಂತರ ತೆಲುಗು ಅಥವಾ ಇಂಗ್ಲೀಷ್ ಭಾಷೆಯಲ್ಲಿ‌ ಶಿಕ್ಷಣ ಮುಂದುವರೆಸುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಕನ್ನಡದಲ್ಲೇ ವಿದ್ಯಾಭ್ಯಾಸವನ್ನು ಮುಂದುವರೆಸುವ ಅವರ ಕನಸಿಗೆ ನೀರೆರಚಿದಂತಾಗಿದೆ.

Share This Article
Leave a comment