February 22, 2026

Newsnap Kannada

The World at your finger tips!

FSAN1

ಎಫ್ ಡಿಎ ಪರೀಕ್ಷೆ: ನಕಲು ಆರೋಪ- ಓರ್ವ ಪೊಲೀಸರ ವಶಕ್ಕೆ

Spread the love

ಪ್ರಶ್ನೆ ಪತ್ರಿಕೆ ಸೋರಿಕೆ ನಂತರ ಮುಂದೂಡಲಾಗಿದ್ದ ಕೆಪಿಎಸ್​​ಸಿ
ಎಫ್​​ಡಿಎ ಪರೀಕ್ಷೆ ಭಾನುವಾರ ರಾಜ್ಯಾದ್ಯಂತ ನಡೆದಿದೆ, ಆದರೆ ವಿಜಯಪುರದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗೆ ನಕಲು ಮಾಡಲು ಸಹಕಾರ ನೀಡಿದ ಆರೋಪದ ಹಿನ್ನೆಲೆಯಲ್ಲಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

FDAN

ವಿಜಯಪುರ ನಗರದ ಜೆ.ಎಸ್.ಎಸ್ ಕಾಲೇಜಿನಲ್ಲಿ ಘಟನೆ ನಡೆದಿದೆ.

ಬ್ಲಾಕ್ ನಂಬರ್ 16ರಲ್ಲಿ ಎಫ್​ಡಿಎ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆ ವೇಳೆ ಅಭ್ಯರ್ಥಿಗೆ 96 ಅಂಕಗಳ ಕೀ ಉತ್ತರ ನೀಡಲಾಗಿತ್ತು ಎನ್ನಲಾಗಿದೆ ಈ ವೇಳೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

ಘಟನೆ ಕುರಿತಂತೆ ಮಾಹಿತಿ ನೀಡಿರುವ ವಿಜಯಪುರ ಡಿಡಿಪಿಐ ಎನ್.ವಿ.ಹೊಸೂರ್, ನಕಲಿಗೆ ಸಹಕರಿಸಿದ ಆರೋಪದಲ್ಲಿ ಜೆ.ಎಸ್.ಎಸ್ ಕಾಲೇಜಿನ ವ್ಯಕ್ತಿಯನ್ನು ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ಹೇಳಿದರು.

error: Content is protected !!