ಸ್ಯಾಂಡಲ್‍ವುಡ್‍ನ ನಟಿ ಮಾನ್ಯ ನಾಯ್ಡು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ.
ಅನಾರೋಗ್ಯ ಸಮಸ್ಯೆಯನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಮಾನ್ಯ ಹಂಚಿಕೊಂಡಿದ್ದಾರೆ.
ಮೂರು ವಾರಗಳ ಹಿಂದಿನಿಂದ ಬೆನ್ನುರಿ ಸಮಸ್ಯೆ ಆಯ್ತು, ನನ್ನ ಎಡ ಕಾಲು ಬಹುತೇಕ ಸ್ವಾಧೀನ ಕಳೆದು ಕೊಳ್ಳುವಂತಿತ್ತು. ನನಗೆ ಪಾರ್ಶ್ವವಾಯುವಾಗಿದೆ. ನನ್ನ ಬೆನ್ನುಮೂಳೆಗೆ ಇಂಜಕ್ಷನ್ ಮಾಡಲಾಯ್ತು. ನಾನು ತುಂಬ ಹೆದರಿದ್ದೇನು. ಕೊರೊನಾ ವೈರಸ್ ಇರೋದರಿಂದ ನಾನು ಏಕಾಂಗಿಯಾಗಿದ್ದೆ. ನಾನು ಬಹುಬೇಗ ಗುಣಮುಖಳಾಗುತ್ತೇನೆ ಎಂಬ ನಿರೀಕ್ಷೆಯಲ್ಲಿದ್ದೆನೆ ಎಂದು ಹೇಳಿದರು.
ಕಳೆದ ಮೂರು ವಾರಗಳಿಂದ ನೋವಿನಿಂದಾಗಿ ನನಗೆ ಕೂರಲು ಆಗುತ್ತಿಲ್ಲ, ನಡೆಯಲು ಆಗುತ್ತಿಲ್ಲ, ಮಲಗಲಾಗುತ್ತಿಲ್ಲ, ನಿಂತುಕೊಳ್ಳಲಾಗುತ್ತಿಲ್ಲ, ಆದರೆ ನಾನು ಆದಷ್ಟು ಹುಷಾರಾಗಲು ಪ್ರಯತ್ನ ಪಡುತ್ತಿದ್ದೇನೆ. ಈ ಜೀವನ ನೀಡಿದ್ದಕ್ಕಾಗಿ ದೇವರಿಗೆ ಸದಾ ಋಣಿಯಾಗಿರುತ್ತೇನೆ. ನನ್ನ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು, ನನಗಾಗಿ ಪ್ರಾರ್ಥನೆ ಸಲ್ಲಿಸಿದವರೆಲ್ಲರಿಗೂ ಧನ್ಯವಾದಗಳು.
ಜೀವನ ಸುಲಭವಲ್ಲ ಅನ್ನೋದನ್ನು ನೆನಪಿಡಿ. ಆದರೆ ಎಂದಿಗೂ ಹಿಂದೆ ಸರಿಯಬೇಡಿ ಎಂದು ತನಗಾಗಿರುವ ನೋವನ್ನು ಮಾನ್ಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತಿ ಮತ್ತು ಅಮ್ಮನೊಂದಿಗೆ ಈಗ ಅಮೇರಿಕಾದಲ್ಲಿ ವಾಸ್ತವ್ಯ ಹೂಡಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ