ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿ ಜಿಲೇಟಿನ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಕ್ರಷರ್ ಮಾಲೀಕ, ಬಿಜೆಪಿ ಮುಖಂಡ ನಾಗರಾಜು ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಫೋಟಗೊಂಡ ಬಳಿಕ ನಾಗರಾಜು ರೆಡ್ಡಿ ತಲೆಮರೆಸಿಕೊಂಡಿದ್ದನು.
ನಾಗರಾಜು ರೆಡ್ಡಿಗೆ ಸ್ಫೋಟಕಗಳನ್ನು ಪೂರೈಸುತ್ತಿದ್ದ ಬ್ಲಾಸ್ಟರ್ ಗಣೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಎ2 ಆರೋಪಿ, ಕ್ರಷರ್ ಮಾಲಿಕ ರಾಘವೇಂದ್ರ ರೆಡ್ಡಿಯನ್ನು ನಿನ್ನೆ ಬಂಧಿಸಲಾಗಿತ್ತು.
ಇಬ್ಬರು ಪೋಲಿಸ್ ಅಧಿಕಾರಿಗಳ ಅಮಾನತ್ತು:
ದುರಂತ ಸಂಬಂಧ ಕರ್ತವ್ಯಲೋಪದ ನ ಮೇಲೆ ಗುಡಿಬಂಡೆ ಎಸ್‍ಐ ಗೋಪಾಲ್ ರೆಡ್ಡಿ, ಇನ್‍ಸ್ಪೆಕ್ಟರ್ ಮಂಜುನಾಥ್‍ರನ್ನು ಅಮಾನತು ಮಾಡಲಾಗಿದೆ.
ಶಿವಮೊಗ್ಗ ಸ್ಫೋಟದ ಬಳಿಕ ಬ್ಲಾಸ್ಟಿಂಗ್ ನಿಲ್ಲಿಸಿದ್ದ ಕಾರಣ ಹಿರೇನಾಗವಲ್ಲಿಯಲ್ಲಿ ಸಂಗ್ರಹಿಸಿದ್ದ ಸ್ಫೋಟಕಗಳನ್ನು ಉಮಾಮಹೇಶ್ ನಾಶ ಮಾಡಲು ಮುಂದಾಗಿದ್ದ. ಆದರೆ ಅದಾಗಲೇ ಸ್ಥಳದಲ್ಲಿ ಕೆಲವರು ಬೆಂಕಿ ಹಾಕಿಕೊಂಡು ಚಳಿ ಕಾಯಿಸ್ತಿದ್ದರು. ಈ ವೇಳೆ ಸ್ಫೋಟಕಗಳನ್ನು ನೀರಿಗೆ ಹಾಕುವ ಬದಲು ಬೆಂಕಿಗೆ ಹಾಕಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಈ ಮಧ್ಯೆ ಹಿರೇನಾಗವಲ್ಲಿ ದುರಂತದಿಂದ ಆತಂಕಗೊಂಡಿರುವ ಬಾಗೆಪಲ್ಲಿಯ ಪುಟ್ಟಪರ್ತಿ ಗ್ರಾಮಸ್ಥರು, ಸ್ಫೋಟಕಗಳ ಗೋದಾಮು ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟಿಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು