February 22, 2026

Newsnap Kannada

The World at your finger tips!

bpl,ration,food

21 kg wheat and 14 kg rice from central for ration card holders? ಪಡಿತರ ಚೀಟಿದಾರರಿಗೆ ಇನ್ಮುಂದೆ ಕೇಂದ್ರದಿಂದ 21 ಕೆಜಿ ಗೋಧಿ ಮತ್ತು 14 ಕೆಜಿ ಅಕ್ಕಿ?

ಮಂಡ್ಯದಲ್ಲಿ ಸತ್ತವರ ಹೆಸರಿನಲ್ಲೂ 750 ಕ್ವಿಂಟಾಲ್‌ ಪಡಿತರ ಪಡೆದ ಅಂಗಡಿ ಮಾಲೀಕನಿಂದ ವಂಚನೆ ?

Spread the love

ಸತ್ತವರ ಹೆಸರಿನಲ್ಲಿ ಪಡಿತರ ಅಕ್ಕಿ ಪಡೆದು ವಂಚನೆ ಮಾಡಿರುವ ಪ್ರಕರಣ ಮಂಡ್ಯ ತಾಲೂಕಿನ‌ ಹುನಗನಹಳ್ಳಿ ಗ್ರಾಮದಲ್ಲಿನ ನ್ಯಾಯ ಬೆಲೆ ಅಂಗಡಿ ಜರುಗಿದೆ.

ಮಾಲೀಕ ರಾಜು ಎಂಬವರು ಮೃತರ ಹೆಸರಿನಲ್ಲಿ ಅಕ್ಕಿ ಪಡೆದು ವಂಚಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸರ್ಕಾರಕ್ಕೆ ಬದುಕಿದ್ದಾರೆಂದು ಲೆಕ್ಕ ಕೊಟ್ಟು ಮೃತರ ಮನೆಯವರಿಗೆ ಹೆಸರು ರದ್ದು ಮಾಡಿದ್ದಾಗಿ ಸುಳ್ಳು ಹೇಳಿ ನ್ಯಾಯ ಬೆಲೆ ಅಂಗಡಿ ಮಾಲೀಕ ರಾಜು ಸುಮಾರು 750 ಕ್ವಿಂಟಾಲ್ ಅಕ್ಕಿ ಪಡೆದಿದ್ದಾರೆ ಎನ್ನಲಾಗಿದೆ. 2-3 ವರ್ಷಗಳಿಂದ ಅಕ್ರಮ ನಡೆಸಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ವಂಚಿಸಿರುವ ರಾಜು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಇತ್ತೀಚೆಗೆ ಗ್ರಾಮದ ಮಹಿಳೆಯೊಬ್ಬರ ಕಾರ್ಡ್‌ನ್ನು ಆನ್​ಲೈನ್‌ನಲ್ಲಿ ಪರಿಶೀಲಿಸುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಇದೇ ರೀತಿ ತನ್ನ ನ್ಯಾಯಬೆಲೆ ವ್ಯಾಪ್ತಿಯ ನಾಲ್ಕೈದು ಗ್ರಾಮಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಕಾರ್ಡ್​ನ ಬಳಕೆ ಮಾಡುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

error: Content is protected !!