February 22, 2026

Newsnap Kannada

The World at your finger tips!

group using mobile

400 ಹುಡುಗಿಯರ ಅಕೌಂಟ್ ಹ್ಯಾಕ್ ಮಾಡಿದ 8 ನೇ ತರಗತಿ ಹುಡುಗ!

Spread the love

ಕೇವಲ 8 ನೇ ತರಗತಿ ಓದುತ್ತಿರುವ ಹುಡುಗನೊಬ್ಬ 400 ಹುಡುಗಿಯರ ಸಾಮಾಜಿಕ ಜಾಲತಾಣದ ಅಕೌಂಟ್ ಹ್ಯಾಕ್ ಮಾಡಿದವನನ್ನು ಕೊಲ್ಕತ್ತಾದ ಪೋಲಿಸರು ಬಂಧಿಸಿದ್ದಾರೆ.

ವಿನಿತ್ ಮಿಶ್ರಾ ಎಂಬಾತನೇ ಬಂಧನಕ್ಕೆ ಒಳಗಾಗಿದ್ದಾನೆ. ಈತ ಹುಡುಗಿಯರ ಅಕೌಂಟ್ ಹ್ಯಾಕ್ ಮಾಡಿ‌ ನಂತರ ದುಡ್ಡಿಗೆ ಬೆದರಿಕೆ ಹಾಕುತ್ತಿದ್ದ.

ಯೂಟ್ಯೂಬ್ ನೋಡಿಕೊಂಡೇ ಅಕೌಂಟ್ ಹ್ಯಾಕ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಈತ ಲಿಂಕ್ ಹುಡುಗಿಯರಿಗೆ ಲಿಂಕ್ ಕಳಿಸುತ್ತಿದ್ದ. ನಂತರ ಅಕೌಂಟ್ ನಿಂದ ಗೌಪ್ಯ ಮಾಹಿತಿ, ಪೋಟೊ ಗಳನ್ನು ಹ್ಯಾಕ್ ಮಾಡಿ ಹುಡುಗಿಯರಿಗೆ ಕಳುಹಿಸಿ ಬೆದರಿಕೆ ಹಾಕಿ ಹಣ ಕೀಳುತ್ತಿದ್ದನೆಂದು ಪೋಲಿಸರು ತಿಳಿಸಿದ್ದಾರೆ.

ಸಂತ್ರಸ್ತೆ ಒಬ್ಬಳು ಧೈರ್ಯ ಮಾಡಿ ಪೋಲಿಸರಿಗೆ ದೂರು ನೀಡಿದಳು. ಆಗ‌ ವಿನಿತ್ ಪೋಲಿಸರ ಬಲೆಗೆ ಬಿದ್ದ.

error: Content is protected !!