12 ಕೆಜಿ 940 ಗ್ರಾಂ ಹ್ಯಾಶಿಸ್ ಆಯಿಲ್, 26 ಕೆಜಿ 250 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಓರ್ವ ಮಹಿಳಾ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ವಿಕ್ರಂ ಅಲಿಯಾಸ್ ವಿಕ್ಕಿ (23), ಸಿಗಿಲ್ ವರ್ಗಿಸ್( 23), ವಿಷ್ಣುಪ್ರಿಯ (22) ಬಂಧಿತ ಆರೋಪಿಗಳು.
ವಿಕ್ರಂ ಮೂಲಕ ಮಾದಕ ವಸ್ತುಗಳನ್ನ ವರ್ಗಿಸ್ ಮತ್ತು ವಿಷ್ಣುಪ್ರಿಯ ಮಾರಾಟ ಮಾಡಿಸುತ್ತಿದ್ದರು ಎನ್ನಲಾಗಿದೆ.
ವಿಕ್ರಂ ಬೆಂಗಳೂರು ಮೂಲದವ. ಸಿಗಿಲ್ ವರ್ಗಿಸ್ ಕೇರಳ ಹಾಗೂ ವಿಷ್ಣುಪ್ರಿಯ ತಮಿಳುನಾಡಿನವ ಎಂದು ತಿಳಿದು ಬಂದಿದೆ.
ಸಿಗಿಲ್ ಮತ್ತು ವಿಷ್ಣುಪ್ರಿಯ ಪ್ರೇಮಿಗಳು. ಕೊತ್ತನೂರಲ್ಲಿ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು. ಅವರ ಮನೆಯಲ್ಲಿಯೇ ಕೋಟಿ ಕೋಟಿ ಮೌಲ್ಯದ ಮಾದಕ ವಸ್ತು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನಿಡಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು