ರಾಜ್ಯ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ: ಮಾರ್ಚ್ ನಲ್ಲಿ ಮಧ್ಯಂತರ ವರದಿಗೆ ಸಿಎಂ ಸೂಚನೆ

Team Newsnap
1 Min Read
7th Pay Commission for State Govt Employees: CM Notice for Interim Report in March ರಾಜ್ಯ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ: ಮಾರ್ಚ್ ನಲ್ಲಿ ಮಧ್ಯಂತರ ವರದಿಗೆ ಸಿಎಂ ಸೂಚನೆ

ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಬೊಮ್ಮಾಯಿ ಗುಡ್ ನ್ಯೂಸ್ ನೀಡಿದ್ದು, 7 ನೇ ವೇತನ ಜಾರಿ ಕುರಿತು ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ವೇತನ ಆಯೋಗದ ವರದಿ ಬಂದ ಕೂಡಲೇ ಕ್ರಮ ಕೈಗೊಳ್ಳುತ್ತೇನೆ, ಮಾರ್ಚ್ ಒಳಗೆ ಮಧ್ಯಂತರ ವರದಿ ಕೊಡಲು ಸೂಚನೆ ನೀಡುತ್ತೇನೆ.ಡ್ರಗ್ಸ್ ದಂಧೆ ಕೇಸ್ – ಮಣಿಪಾಲ ವಿವಿಯ 42 ವಿದ್ಯಾರ್ಥಿಗಳು ಅಮಾನತು

ಮಧ್ಯಂತರ ವರದಿಯ ಶಿಫಾರಸು ಜಾರಿಗೆ ಸರ್ಕಾರ ಬದ್ದವಾಗಿದೆ ಎಂದು ಮಾಹಿತಿ ನೀಡಿದರು. ಬಿಜೆಪಿ ಸರ್ಕಾರಕ್ಕೆ ಸರ್ಕಾರಿ ನೌಕರರ ಏಳನೇ ಪರಿಷ್ಕ್ರೃತ ವೇತನ ಹಾಗೂ ಹಳೆ ಪಿಂಚಣಿ ಯೋಜನೆಗಾಗಿನ ಪಟ್ಟು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಒಪಿಎಸ್ ಜಾರಿಗಾಗಿ ನೌಕರರ ಪಟ್ಟು ಹಿಡಿದಿದ್ದು, ಫೆ.22 ರಿಂದ ಫೆ.28 ರವರೆಗೆ ಸರ್ಕಾರಕ್ಕೆ 7 ದಿನಗಳ ಗಡುವು ನೀಡಿದ್ದಾರೆ. ಒಂದೇ ವೇಳೆ ಯೋಜನೆ ಜಾರಿಗೆ ತರದಿದ್ದರೆ ಮಾರ್ಚ್ 1 ರಿಂದ ಕರ್ತವ್ಯಕ್ಕೆ ಗೈರಾಗಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ನೌಕರರು ನಿರ್ಧರಿಸಿದ್ದಾರೆ.

ಸರ್ಕಾರಿ ನೌಕರರು ತಮ್ಮ ಪಟ್ಟು ಬಿಗಿಪಡಿಸಲು ಮುಂದಾಗಿದ್ದು, ಬೊಮ್ಮಾಯಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.ರಾಜ್ಯದ ಸರ್ಕಾರಿ ನೌಕರರು ಬಜೆಟ್ ನಲ್ಲಿ ಸಿಎಂ ಬೊಮ್ಮಾಯಿ ಬಂಪರ್ ನೀಡುವ ನಿರೀಕ್ಷೆಯಲ್ಲಿದ್ದರು. 7ನೇ ವೇತನ ಆಯೋಗದ ಬಗ್ಗೆ ಸಿಎಂ ಪ್ರಸ್ತಾಪಿಸುತ್ತಾರೆ ಅಂತ ಅಂದುಕೊಂಡಿದ್ದರು. ಆದರೆ ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ಈ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ.ಇದರಿಂದ ಸರ್ಕಾರಿ ನೌಕರರು ಇನ್ನಷ್ಟು ಅಸಮಾಧಾನಗೊಂಡಿದ್ದಾರೆ.

Share This Article
Leave a comment