SSLC, PUC ಪಾಸಾದವರಿಗೆ ರೈಲ್ವೇ ಇಲಾಖೆಯಲ್ಲಿ 7784 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

Team Newsnap
1 Min Read

SSLC ಮತ್ತು PUC ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ 7784 ಹುದ್ದೆಗಳು ಖಾಲಿ ಇದ್ದು ಅರ್ಜಿ ಆಹ್ವಾನಿಸಲಾಗಿದೆ.

ರೈಲ್ವೆ ನೇಮಕಾತಿ ಹುದ್ದೆಯ ವಿವರ :

ರೈಲ್ವೆ ನೇಮಕಾತಿ ಮಂಡಳಿಯು ಖಾಲಿ ಇರುವ 7,784 ಟ್ರಾವೆಲಿಂಗ್ ಟಿಕೆಟ್ ಪರೀಕ್ಷಕ (TTE) ಹುದ್ದೆಗಳಿಗೆ ಅರ್ಜಿ ಅಹ್ವಾನ ಮಾಡಿದೆ.

ರೈಲ್ವೆ ಇಲಾಖೆಯ ಹುದ್ದೆಯಲ್ಲಿ ಆಸಕ್ತಿ ಹೊಂದಿದವರು ಅಧಿಕೃತ ವೆಬ್ ಸೈಟ್ indianrailways.gov.in ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಯ ಕೊನೆಯ ದಿನದ 30 ದಿನಗಳ ಒಳಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು –

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು 10 ಅಥವಾ 12 ನೇ ತರಗತಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯ ವಯಸ್ಸು 18 ರಿಂದ 30 ವರ್ಷ ವಯೋಮಿತಿಗೆ ನಿಗದಿ ಪಡಿಸಲಾಗಿದೆ. ಇನ್ನು ಹುದ್ದೆಗೆ ಆಯ್ಕೆ ಆದವರಿಗೆ 5,200 ರಿಂದ 20,200 ರೂ. ವೇತನ ನೀಡಲಾಗುತ್ತದೆ.ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಏರಿಕೆ: ಅರಣ್ಯ ಸಚಿವ ಈಶ್ವರ ಖಂಡ್ರೆ

ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಎರಡನೇ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ವೈದ್ಯಕೀಯ ಫಿಟ್ ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣದ ನಂತರ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಇನ್ನು ಸಾಮಾನ್ಯ ವರ್ಗದವರಿಗೆ 500 ರೂ. ಹಾಗೂ ಹಿಂದುಳಿದ ವರ್ಗದವರಿಗೆ 250 ರೂ. ಅರ್ಜಿ ಶುಲ್ಕ ವಿಧಿಸಲಾಗುತ್ತದೆ.

WhatsApp Image 2023 07 21 at 9.21.33 PM

Share This Article
Leave a comment