- ವಂಚಕ, ಜೋತಿಷಿ ಯುವರಾಜ್ ಸ್ವಾಮಿಯಿಂದ ಅಕ್ರಮವಾಗಿ ಹಣ ಪಡೆದಿಲ್ಲ.
- ಸಿನಿಮಾ ಮಾಡುವ ಬಗ್ಗೆ ಯಾವುದೇ ಒಪ್ಪಂದ ಆಗಿರಲಿಲ್ಲ. ಆದರೂ ನನ್ನ ಖಾತೆಗೆ ಸ್ವಾಮಿಯಿಂದ 15 ಲಕ್ಷ ಹಾಗೂ ಆತನ ಭಾವನಿಂದ 60 ಲಕ್ಷ ರುಗಳ ಜಮೆಮಾಗಿದೆ.
ನನ್ನ ಖಾತೆಗೆ 75 ಲಕ್ಷ ರು ಬಂದಿದೆ. ಬಂಧಿತ ಸ್ವಾಮಿ ಖಾತೆಯಿಂದ 15 ಲಕ್ಷ ರು ಹಾಗೂ ನನಗೆ ಪರಿಚಯವೇ ಇಲ್ಲದ ನಿರ್ಮಾಪಕರಿಂದ 60 ಲಕ್ಷ ರು. ಸೇರಿ 75 ಲಕ್ಷ ರು ನನ್ನ ಖಾತೆಗೆ ಹಣ ಬಂದಿದೆ ಎಂದು ನಟಿ ರಾಧಿಕಾ ಕುಮಾರಸ್ವಾಮಿ ಬುಧವಾರ ಸ್ಪಷ್ಟವಾಗಿ ಹೇಳಿದರು.
ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಧಿಕಾ, ಬಂಧಿತ ಯುವರಾಜ್ ಅಲಿಯಾಸ್ ಸ್ವಾಮಿ ನಟಿ ರಾಧಿಕಾ ಖಾತೆಗೆ 1 ಕೋಟಿ 25 ಲಕ್ಷ ರು ವರ್ಗಾವಣೆ ಮಾಡಿದ್ದಾರೆ ಎಂಬ ಸುದ್ದಿ ಬಗ್ಗೆ ಸ್ಷಪ್ಟನೆ ನೀಡಲು ರಾಧಿಕಾ ಮುಂದಾದರು.
ಬಂಧಿತ ವಂಚಕ ಸ್ವಾಮಿ ಜೊತೆ ನಮಗೆ ಯಾವುದೇ ವ್ಯವಹಾರದ ಸಂಬಂಧವಿಲ್ಲ. ನಾಟ್ಯ ರಾಣಿ ಶಾಂತಲಾ ಚಿತ್ರದಲ್ಲಿ ನಟಿಸಲು ನನಗೆ ಅಡ್ವಾನ್ಸ್ ರೂಪದಲ್ಲಿ 15 ಲಕ್ಷ , ರು ನಂತರ ನನಗೆ ಪರಿಚಯವೇ ಇಲ್ಲದ 60 ಲಕ್ಷ ರು ಸೇರಿ 75 ಲಕ್ಷ ಬಂದಿದೆ. ಯಾವುದೂ ಅಕ್ರಮ ನಡೆದಿಲ್ಲ ಎಲ್ಲವೂ ವೈಟ್ ನಲ್ಲಿ ಬಂದಿರುವುದರಿಂದ ನಾನು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುತ್ತೇನೆ.
- ನಾನು ತೆಗೆದುಕೊಂಡಿರುವ ಹಣ ಸಿನಿಮಾಗಾಗಿ ಮಾತ್ರ. ಬೇರೆ ಯಾವುದೇ ಉದ್ದೇಶಕಲ್ಲ.
- ನಾನು ರಾಜಕಾರಣಕ್ಕೆ ಬರುವ ಉದ್ದೇಶ ಸಧ್ಯಕ್ಕೆ ಇಲ್ಲ. ನನ್ನ ಕನಸು , ಆಸೆ ಎಲ್ಲವೂ ಸಿನಿಮಾ ಆಗಿದೆ.
- ನಂಗೆ ಬಹುತೇಕ ರಾಜಕಾರಣಿಗಳ ಪರಿಚಯವಿದೆ. ಅದು ಸಿನಿಮಾಗಾಗಿ ಹೊರತು ಬೇರೆ ಉದ್ದೇಶಕ್ಕಾಗಿ ರಾಜಕಾರಣಿಗಳ ಸಂಪರ್ಕ ಹೊಂದಿಲ್ಲ.
- ನಮ್ಮ ತಂದೆ ಮೂಲಕ ಯವರಾಜ್ ಅಲಿಯಾಸ್ ಸ್ವಾಮಿ ಪರಿಚಯ ಕಳೆದ 17 ವರ್ಷ ಇದೆ. ಅವರು ಒಬ್ಬ ಜೋತಿಷಿ ಗಳೂ ಆಗಿದ್ದರು. ನಮ್ಮ ಮನೆಯಲ್ಲಿ ಪೂಜೆಗೆ, ದಾನ – ಧರ್ಮ ಮಾಡುವ ಬಗ್ಗೆ ಸಲಹೆ ನೀಡುತ್ತಿದ್ದರು.
- ನಾನು ಈಗಲೇ ಪಾಲಿಟಿಕ್ಸ್ ಗೆ ಬರುವ ಬಗ್ಗೆ ಆಸಕ್ತಿ ಇಲ್ಲ. ಮನೆಯಲ್ಲಿ ತುಂಬಾ ಒತ್ತಾಯ ಮಾಡುತ್ತಿದ್ದರು. ಆದರೆ ನಾನೇ ನನ್ನ ಸಿನಿಮಾ ಅಸಕ್ತಿ ಅಂತ್ಯವಾದ ನಂತರ ಮುಂದೆ ನೋಡೋಣ ಎಂದರು ರಾಧಿಕಾ
- ನನಗೆ ಡಿಸೆಂಬರ್ ನಲ್ಲಿ ಗ್ರಹಚಾರ ಚೆನ್ನಾಗಿಲ್ಲ ಎಂದು ಇದೇ ಸ್ವಾಮಿ ಭವಿಷ್ಯ ಹೇಳಿದ್ದರು. ಆದರೆ ಆತನಿಂದಲೇ ನನ್ನ ಗ್ರಹಚಾರ ಕೆಡುತ್ತದೆ ಎಂದು ಅಂದುಕೊಂಡಿರಲಿಲ್ಲ.
- ನನ್ನ ಸಹೋದರಗೆ ಯಾವುದೇ ಹಣ ವರ್ಗಾವಣೆ ಆಗಿಲ್ಲ. ಆತನನ್ನು ಈಗಾಗಲೇ ಸಿಸಿಬಿ ಪೋಲಿಸರು ವಿಚಾರಣೆ ಮಾಡಿ ಕಳುಹಿಸಿದ್ದಾರೆ. ನಾಳೆ ನನ್ನನ್ನೂ ಕರೆದರೆ ನಾನೂ ಕೂಡ ಹೋಗಿ ಪೋಲಿಸರಿಗೆ ಅಗತ್ಯ ಮಾಹಿತಿ ಕೊಟ್ಟು ಬರುವೆ ಎಂದರು ರಾಧಿಕಾ.
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
More Stories
ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು