ನಾಗಮಂಗಲದಲ್ಲಿ ಗ್ರಾಮ ಲೆಕ್ಕಿಗ ಫೋನ್​ ಪೇಯಿಂದ 66 ಸಾವಿರ ರು ಲಂಚ : ಡಿ ಸಿ ಗೆ ದೂರು

Team Newsnap
1 Min Read

ಮಂಡ್ಯ: ಆನ್​ಲೈನ್​ ಮೂಲಕ 66 ಸಾವಿರ ರು ಲಂಚ ಪಡೆದರೂ , ಕೆಲಸ ಮಾಡಿಕೊಡದೇ ಸತಾಯಿಸುತ್ತಿರುವ ಗ್ರಾಮ ಲೆಕ್ಕಿಗನ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.

ನಾಗಮಂಗಲ ತಾಲೂಕಿನ ಲಾಳನಕೆರೆ ಗ್ರಾಮ ಲೆಕ್ಕಿಗ ಇ-ಸ್ವತ್ತು ಮಾಡಿಕೊಡಲು ಫೋನ್ ಪೇ ಮೂಲಕ ಲಂಚ ಸ್ವೀಕರಿಸಿರುವ ಆರೋಪ ಹೊತ್ತಿದ್ದಾನೆ.

ನಾಗಮಂಗಲ ತಾಲೂಕಿನ ಲಾಳನಕೆರೆ ವೃತ್ತದ ಗ್ರಾಮಲೆಕ್ಕಿಗ ನಿಂಗಪ್ಪ ಸುರಪುರ ವಿರುದ್ಧ ಮಹಿಳೆ ದಾಖಲೆ ಸಮೇತ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಮೀನಾಕ್ಷಿ ಎಂಬ ಮಹಿಳೆಯಿಂದ 66 ಸಾವಿರ ರೂ. ಲಂಚ ಪಡೆದಿರುವ ಆರೋಪವಿದೆ. ಹಣ ಪಡೆದು ವರ್ಷವಾದರೂ ಖಾತೆ ಮಾಡಿಕೊಡಲಿಲ್ಲ.

ಕೊನೆಗೆ ನಾಗಮಂಗಲ ತಹಸೀಲ್ದಾರ್​ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.ಸಂಸದ ಪ್ರತಾಪ್ ಸಿಂಹ ವಿರುದ್ಧ ಅವಹೇಳನಕಾರಿ ಕಾಮೆಂಟ್ – ಹೆಡ್ ಕಾನ್‌ಸ್ಟೇಬಲ್ ಅಮಾನತು

ಇತ್ತ ದೂರು ಕೊಡುತ್ತಿದ್ದಂತೆ ಲಂಚಬಾಕ ಗ್ರಾಮ ಲೆಕ್ಕಿಗ ಕಚೇರಿಗೂ ಬರದೇ ಗೈರಾಗುತ್ತಿದ್ದಾರೆ.

Share This Article
Leave a comment