6 ತಿಂಗಳ ಗರ್ಭಿಣಿ ಕೊರೋನಾ ಗೆ ಬಲಿ – ಮಂಡ್ಯ ಮಿಮ್ಸ್ ನಲ್ಲಿ ಘಟನೆ

Team Newsnap
0 Min Read

ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ 6 ತಿಂಗಳ ಗರ್ಭಿಣಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಮದ್ದೂರು ತಾಲೂಕಿನ ಯರಗನಹಳ್ಳಿ ರಂಜಿತಾ (24) ಸಾವನ್ನಪ್ಪಿರುವ ಗರ್ಭಿಣಿ.

ಕಳೆದ 10 ದಿನಗಳ ಹಿಂದೆ ರಂಜಿತಾ ಅವರಿಗೆ ಕೋವಿಡ್ ಸೋಂಕು ತಗುಲಿದೆ. ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ರಂಜಿತಾ ಸಾವನ್ನಪ್ಪಿದ್ದಾರೆ.

Share This Article
Leave a comment