ಸುರತ್ಕಲ್ ನ ಫಾಜಿಲ್ ಹತ್ಯೆ ಪ್ರಕರಣದಲ್ಲಿ ಬಂಧನವಾಗಿದ್ದ ಅಜಿತ್ ಡಿಸೋಜಾ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಧಿತ 6 ಮಂದಿ ಆರೋಪಿಗಳನ್ನು ಸಂಜೆ ವೇಳೆಗೆ ಆರೋಪಿಗಳನ್ನು ಕೋರ್ಟ್ಗೆ ಹಾಜರು ಪಡಿಸಿ, 14 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲು ಮನವಿ ಮಾಡುತ್ತೇವೆ ಎಂದು ಕಮಿಷನರ್ ಶಶಿ ಕುಮಾರ್ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಮಿಷನರ್, 6 ಮಂದಿ ಆರೋಪಿಗಳ ಹಿನ್ನೆಲೆಯ ಕುರಿತು ವಿವರಿಸಿದ್ದಾರೆ
ಇದನ್ನು ಓದಿ – ಮಾಜಿ ಸಿಎಂ ಹೆಚ್ಡಿ ಕೆ ಬೆಂಗಾವಲು ವಾಹನ ಅಪಘಾತ- ಮೂವರಿಗೆ ಗಾಯ
ಕೊಲೆ ಪ್ರಕರಣದಲ್ಲಿ ಸದ್ಯ ಸುಹಾಸ್ (29), ಮೋಹನ್ (26), ಗಿರಿಧರ್ (23), ಅಭಿಷೇಕ್ (21), ಧೀಕ್ಷಿತ್ (21), ಶ್ರೀನಿವಾಸ್ (23) ಎಂಬ ಆರೋಪಿಗಳ ಬಂಧನವಾಗಿದೆ ಬಂಧಿತರೆಲ್ಲರ ವಿರುದ್ಧ ಅನೇಕ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ರೌಡಿ ಶೀಟರ್ಗಳನ್ನು ತೆರೆಯಲಾಗಿದೆ
ಆರೋಪಿಗಳ ಹಿನ್ನೆಲೆ :
1) ಸುಹಾಸ್ ಶೆಟ್ಟ (29) ಮಂಗಳೂರಿನ ಬಜ್ಪೆಯ ಕೊಂಚಾರುವಿನ ಬಜ್ಪೆ ಚೆಕ್ ಪೋಸ್ಟ್ನಲ್ಲಿ ವಾಸ.
ಆತನ ಮೇಲೆ ಗಲಾಟೆ, ಹಲ್ಲೆ, ಬೆದರಿಕೆ ಆರೋಪಗಳ ಹಿನ್ನೆಲೆಯಲ್ಲಿ ಬಜ್ಪೆಯಲ್ಲಿ 4, ಬೆಳತಂಗಡಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ.
2) ಮೋಹನ್ ಅಲಿಯಾಸ್ ಮೋಹನ್ ಸಿಂಗ್ (26) ಮಂಗಳೂರಿನ ಕುಳಾಯಿಯ ಕಾವಿನ ಕಲ್ಲು 2ನೇ ಅಡ್ಡ ರಸ್ತೆಯಲ್ಲಿ ವಾಸಿಸುತ್ತಿದ್ದಾನೆ. ಆತನ ವಿರುದ್ಧ ಹಲ್ಲೆ, ಗಲಾಟೆ, ಬೆದರಿಕೆ ಆರೋಪಗಳ ಹಿನ್ನೆಲೆಯಲ್ಲಿ ಸುರತ್ಕಲ್ ಹಾಗೂ ಕಾವುರು ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
3) ಗಿರಿಧರ್ (23) ಗಿರಿಧರ ಮಂಗಳೂರಿನ ಸುರತ್ಕಲ್ನ ವಿಧ್ಯಾನಗರ ಕುಳಾಯಿ ನಿವಾಸಿ, ಈತನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಗಲಾಟೆ, ಬೆದರಿಕೆ ಸಂಬಂಧ 2 ಪ್ರಕರಣಗಳು ದಾಖಲಾಗಿದೆ.
4) ಅಭಿಷೇಕ (21) ಮಂಗಳೂರಿನ ಸುರತ್ಕಲ್ನ ಕಾಟ ಪಳ್ಳ 3ನೇ ಬ್ಲಾಕ್ ನಿವಾಸಿಯಾಗಿದ್ದು, ಈತನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಗಲಾಟೆ, ಬೆದರಿಕೆ ಸಂಬಂಧ 2 ಪ್ರಕರಣಗಳು ದಾಖಲಾಗಿದೆ.
5) ಶ್ರೀನಿವಾಸ್ (23) ಮಂಗಳೂರಿನ ಸುರತ್ಕಲ್ನ ಕಾಟ ಪಳ್ಳ 3ನೇ ಬ್ಲಾಕ್ ನಿವಾಸಿ . ಈತನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 3, ಉರ್ವ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ.
6) ದೀಕ್ಷಿತ್ (21) ಮಂಗಳೂರಿನ ಸುರತ್ಕಲ್ನ ಕಾವಳ 2ನೇ ಬ್ಲಾಕ್ ನಿವಾಸಿ, ಈತನ ವಿರುದ್ಧ ಸುರತ್ಕಲ್, ಮಂಪೂರ್ವ, ಕಾವೂರು ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ