March 11, 2026

Newsnap Kannada

The World at your finger tips!

WhatsApp Image 2022 07 10 at 1.59.01 PM

ಕೆಆರ್‌ಎಸ್‌ ಡ್ಯಾಂ ಭರ್ತಿಗೆ 1 ಅಡಿ ಬಾಕಿ – 49 ಸಾವಿರ ಕ್ಯೂಸೆಕ್ ನೀರು ನದಿಗೆ

Spread the love

ಕೆಆರ್‌ಎಸ್‌ ಡ್ಯಾಂ ಭರ್ತಿಗೆ 1 ಅಡಿ ಮಾತ್ರ ಬಾಕಿ ಇದೆ. 49 ಸಾವಿರ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ ಈ ಕೊಳ್ಳದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.

ಕೆಆರ್‌ಎಸ್‌ ಅಣೆಕಟ್ಟಿಗೆ 50467 ಕ್ಯೂಸೆಕ್ ನೀರು ಹರಿದು ಬರುತ್ತಿದೆ ಇದರಿಂದ ಡ್ಯಾಂ ಸಂಪೂರ್ಣ ಭರ್ತಿಗೆ ಇನ್ನೊಂದು ಅಡಿಯಷ್ಟೇ ಬಾಕಿ ಇದೆ.

124.80 ಅಡಿಗಳಷ್ಟು ಇರುವ ಕೆಆರ್‌ಎಸ್‌ ಡ್ಯಾಂ ಸದ್ಯ 122.60 ಅಡಿಗಳಷ್ಟು ಭರ್ತಿಯಾಗಿದೆ. ಡ್ಯಾಂ ಭರ್ತಿಗೆ ಇನ್ನೂ ಕ್ಷಣಗಣನೆ ಇರುವ ಕಾರಣ ಡ್ಯಾಂನಿಂದ ನದಿಗೆ 106 ಅಡಿ ಮಟ್ಟದ 15 ಗೇಟ್‍ಗಳ ಮೂಲಕ 49000 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ.

ಕೆ ಆರ್ ಎಸ್ ಆಣೆಕಟ್ಟೆ ನೀರಿನ ಮಟ್ಟ :

ಆಣೆಕಟ್ಟೆ ಗರಿಷ್ಠ ಮಟ್ಟ : 124.80 ಅಡಿ

ಇಂದಿನ ಮಟ್ಟ : 122.60 ಅಡಿ

ಒಳಹರಿವು : 50467 ಕ್ಯೂಸೆಕ್

ಹೊರಹರಿವು :50573 ಕ್ಯೂಸೆಕ್

error: Content is protected !!