September 29, 2022

Newsnap Kannada

The World at your finger tips!

ind vs pak 2

ಭಾರತದ ವಿರುದ್ದ ಪಾಕ್ ಗೆ 5 ವಿಕೆಟ್ ಗಳ ರೋಚಕ ಗೆಲುವು

Spread the love

ದುಬೈನ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಭಾರತ – ಪಾಕಿಸ್ತಾನ ಪಂದ್ಯದಲ್ಲಿ ಪಾಕ್ ತಂಡ 5 ವಿಕೆಟ್ ಗಳ ರೋಚಕ ಗೆಲುವು ಕಂಡಿದೆ

ಪಾಕಿಸ್ತಾನ ಎರಡನೇ ಇನ್ನಿಂಗ್ಸ್ ನಲ್ಲಿ ಉತ್ತಮ ಅಟ ಆರಂಭಿಸಿತು . ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಕೆಲವು ಹೊತ್ತು ಮಾತ್ರ ಕ್ರಿಸ್ ನಲ್ಲಿದ್ದರು. ವಿಕೆಟ್ ಕೀಪರ್ ರಿಜ್ವಾನ್ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿಗೆ ನೆರವಾದರು.

ಪಾಕ್ ಗೆ 182 ರನ್ ಗುರಿ :

ಇದಕ್ಕೂ ಮುನ್ನ ಏಷ್ಯಾಕಪ್​​​ ಸೂಪರ್​ 4 ಹಂತದ 2ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಪಾಕಿಸ್ತಾನಕ್ಕೆ 182 ರನ್​ ಟಾರ್ಗೆಟ್​ ಕೊಟ್ಟಿತ್ತು .

ಟಾಸ್​ ಸೋತರೂ ಮೊದಲು ಬ್ಯಾಟಿಂಗ್​​ ಮಾಡಿದ ಟೀಂ ಇಂಡಿಯಾ ಪರ ಓಪನರ್​ ಆಗಿ ಬಂದ ರೋಹಿತ್​ ಶರ್ಮಾ, ಕೆ.ಎಲ್​ ರಾಹುಲ್​​ ಉತ್ತಮ ಆರಂಭ ನೀಡಿದರು

ಆರಂಭದಲ್ಲಿ 16 ಬಾಲ್​​ನಲ್ಲಿ ರೋಹಿತ್​​ 3 ಫೋರ್​​, 2 ಸಿಕ್ಸರ್​​ ಸಮೇತ 28 ರನ್​ ಹೊಡೆದರು. ರಾಹುಲ್​​ 2 ಬಾಲ್​ನಲ್ಲಿ 28 ರನ್​ ಬಾರಿಸಿದರು. ನಂತರ ಕ್ರೀಸ್​ಗೆ ಬಂದ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್​ ಮಾಡಿದರು ಕಿಂಗ್​ ಕೊಹ್ಲಿ ಕೊನೆಯವರೆಗೂ ನಿಂತು 44 ಬಾಲ್​​ನಲ್ಲಿ 1 ಸಿಕ್ಸರ್​​, 4 ಫೋರ್​ ಸಮೇತ 60 ರನ್​​ ಸಿಡಿಸಿದರು

ಸೂರ್ಯಕುಮಾರ್​​ ಯಾದವ್​​ 13, ರಿಷಭ್​ ಪಂತ್​​ 14, ದೀಪಕ್​ ಹೂಡಾ 16 ರನ್​ ಗಳಿಸಿದರು. ಟೀಂ ಇಂಡಿಯಾ 20 ಓವರ್​​ನಲ್ಲಿ 7 ವಿಕೆಟ್​ ನಷ್ಟಕ್ಕೆ 18 ರನ್​​ ಗಳಿಸಿದೆ. ಈ ಮೂಲಕ ಪಾಕ್​ಗೆ ಬಿಗ್​ ಟಾರ್ಗೆಟ್​ ಕೊಟ್ಟಿತ್ತು.

error: Content is protected !!