ಶಿವಮೊಗ್ಗದಲ್ಲಿ 5 ತಿಂಗಳ ವಿವಾಹಿತೆ ನೇಣಿಗೆ ಶರಣು – ಆತ್ಮಹತ್ಯೆಗೆ ಕಾರಣ ನಿಗೂಢ?

Team Newsnap
1 Min Read

ಐದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಯುವತಿಯೊಬ್ಬಳು ಶಿವಮೊಗ್ಗದ ಅಶ್ವಥ್ ನಗರದ ಮನೆಯ ಗ್ಯಾರೇಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನವ್ಯಶ್ರೀ (23) ನೇಣಿಗೆ ಶರಣಾದ ದುರ್ದೈವಿ. ಇವರು ತಮ್ಮ ಮನೆಯ ಕಾರ್ ಶೆಡ್‌ನಲ್ಲಿ ಶನಿವಾರ ರಾತ್ರಿಯೇ ನೇಣಿಗೆ ಶರಣಾಗಿದ್ದಾರೆ. 5 ತಿಂಗಳ ಹಿಂದಷ್ಟೇ ಆಕಾಶ್ ಎಂಬುವರನ್ನು ವಿವಾಹವಾಗಿದ್ದರು. ಶಿವಮೊಗ್ಗದ ಖ್ಯಾತ ವೈದ್ಯೆ ಡಾ. ಜಯಶ್ರೀ ಹೊಮ್ಮರಡಿ ಅವರ ಸೊಸೆಯೂ ಹೌದು.

ನವ್ಯಶ್ರೀ ಶನಿವಾರ ರಾತ್ರಿ ತುಳಸಿ ಪೂಜೆಯನ್ನು ನೆರವೇರಿಸಿ ಅರಿಶಿನ, ಕುಂಕುಮವನ್ನೂ ಸ್ವೀಕರಿಸಿದ್ದರು ಎನ್ನಲಾಗಿದೆ. ಬಳಿಕ ಕಾರು ಶೆಡ್‌ನಲ್ಲಿ ನೇಣು ಬಿಗಿದು, ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನವ್ಯಶ್ರೀ ಕುಟುಂಬಸ್ಥರ ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಾಗಿದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment