ಕೊಡಗಿನಲ್ಲಿ 45 ಸೆಕೆಂಡ್ ನಡುಗಿದ ಭೂಮಿ: ಆತಂಕದಲ್ಲಿ ಜನ

Team Newsnap
1 Min Read
45 seconds of tremors in Kodagu: people in anxiety

ಜಿಲ್ಲೆಯಲ್ಲಿ ಮತ್ತೆ ಭೂಮಿ 45 ಸೆಕೆಂಡ್ ಗಳ ಕಾಲ ಕಂಪಿಸಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಮಡಿಕೇರಿ ತಾಲ್ಲೂಕಿನ ಕರಿಕೆ ವ್ಯಾಪ್ತಿಯಲ್ಲಿ ಭೂಕಂಪನದ ಅನುಭವ ಆಗಿದೆ. ಶನಿವಾರ ಬೆಳಗ್ಗೆ 9 ಗಂಟೆ 10 ನಿಮಿಷಕ್ಕೆ ಭೂಮಿ ಕಂಪಿಸಿದೆ.ಮನೆಯ ವಸ್ತುಗಳೆಲ್ಲಾ ಅಲ್ಲಾಡಿದ ಹಿನ್ನೆಲೆಯಲ್ಲಿ ಜನ ಆತಂಕಗೊಂಡಿದ್ದಾರೆ.ಇದನ್ನು ಓದಿ –ದ್ರೌಪದಿ ರಾಷ್ಟ್ರಪತಿಯಾದರೆ, ಪಾಂಡವರು ಯಾರು? ರಾಮ್ ಗೋಪಾಲ್ ವರ್ಮಾ ಮತ್ತೆ ವಿವಾದ

ಪಟ್ಟಿಘಾಟ್ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಭಾರೀ ಶಬ್ದ ಆಗಿದೆ. ಬಳಿಕ ಸಂಪಾಜೆ, ಚೆಂಬು, ಗೂನಡ್ಕ ಗ್ರಾಮಗಳಲ್ಲೂ ಭೂ ಕಂಪನದ ಅನುಭವ ಆಗಿದೆ.ಮೊನ್ನೆಯೂ ಕೊಡಗಿನ ನಾಲ್ಕು ಗ್ರಾಮಗಳ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿತ್ತು. ದೇವಸ್ತೂರು, ನೇಗಳ್ಳೆ ಮುಂತಾದ ಕಡೆ ಭೂಮಿ ಕಂಪಿಸಿದೆ. ಇಂದು ಕರಿಕೆ, ಚೆಂಬು ಗ್ರಾಮಗಳ ವ್ಯಾಪ್ತಿಯಲ್ಲಿ ಭೂಕಂಪನ ಆಗಿದೆ.

ಈ ಹಿನ್ನೆಲೆಯಲ್ಲಿ ಅಲ್ಲಿಕಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.

Share This Article
Leave a comment