March 14, 2026

Newsnap Kannada

The World at your finger tips!

sudhakar1

ರಾಜ್ಯದಲ್ಲಿ 446 ಮಂದಿಗೆ ಬ್ಲಾಕ್​ ಫಂಗಸ್ : 12 ಮಂದಿ‌ ಸಾವು – ಸಚಿವ. ಡಾ. ಸುಧಾಕರ್

Spread the love

ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸುಧಾಕರ್​ ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಕೇಸ್ ಕಡಿಮೆ ಆಗಿದೆ. ಕೆಲವು ಜಿಲ್ಲೆಯಲ್ಲಿ ಏರಿಕೆ ಆಗಿದೆ.ಅನೇಕ ಗ್ರಾಮಗಳು ಕೋವಿಡ್ ಮುಕ್ತವಾಗಿದೆ ಎಂಬುದೇ ಸಮಾಧಾನ‌ ಸಂಗತಿ‌ ಎಂದರು.

ಬ್ಲಾಕ್ ಫಂಗಸ್ ಕುರಿತಂತೆ ಇಂದು ಅಧಿಕಾರಿಗಳ ಸಭೆ ನಡೆಸಿದ್ದೇನೆ. ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಾಖಲಾಗಿರುವ ಕೇಸ್ ಗಳ ಬಗ್ಗೆ ಮಾಹಿತಿಯನ್ನು ಕೇಂದ್ರಕ್ಕೆ ರವಾನೆ ಮಾಡಲಾಗಿದೆ ಎಂದರು

446 ಜನರಲ್ಲಿ ಫಂಗಸ್ ರಿಪೋರ್ಟ್ ಆಗಿದೆ. ಬ್ಲಾಕ್ ಫಂಗಸ್​ನಿಂದ 446 ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 11 ಜನರು ಮನೆಯಲ್ಲೇ ಇದ್ದಾರೆ. ಬ್ಲಾಕ್ ಫಂಗಸ್​ನಿಂದ ರಾಜ್ಯದಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಎಂದು ವಿವರಿಸಿದರು.‌

18 ಸಾವಿರ ಎಂಪೋಟೆರಸಿನ್‌ ಬಿ ವೈಯಲ್ ಬರ್ತಿದೆ. ದೇಶದಲ್ಲಿ 9 ಸಾವಿರ ಜನರಿಗೆ ಬ್ಲಾಕ್ ಫಂಗಸ್ ಬಂದಿದೆ ಎಂದರು.

ಕೇಂದ್ರದಿಂದ 1 ಸಾವಿರ ವಯಲ್ಸ್​
ಕೇಂದ್ರ ಸರ್ಕಾರ ರಾಜ್ಯಕ್ಕೆ ಔಷಧಿ ಕಳಿಸುತ್ತದೆ. ಬೇರೆಡೆಯಿಂದ 18 ಸಾವಿರ ವಯಲ್ಸ್ ಔಷಧಿ ಬಂದಿದೆ. ಅದರಲ್ಲಿ ನಮಗೆ 1 ಸಾವಿರ ವಯಲ್ಸ್ ಕಳುಹಿಸಿದ್ದಾರೆ. ಆಸ್ಪತ್ರೆಯಲ್ಲಿ ಸಿಸಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

error: Content is protected !!