ಶ್ರೀರಂಗಪಟ್ಟಣದ ನೆರಳೆಕೆರೆಯಲ್ಲಿ ಚುನಾವಣಾಧಿಕಾರಿಗಳಿಂದ 440 ಸೀರೆ ಸೀಜ್

Team Newsnap
1 Min Read
440 sarees were seized by the Election Officers at Nerlakere, Srirangapatna ಶ್ರೀರಂಗಪಟ್ಟಣದ ನೆರಳೆಕೆರೆಯಲ್ಲಿ ಚುನಾವಣಾಧಿಕಾರಿಗಳಿಂದ 440 ಸೀರೆ ಸೀಜ್

ವಿಧಾನಸಭಾ ಚುನಾವಣೆಗೆ ಮುಂದಿನ ವಾರ ದಿನಾಂಕ ಘೋಷಣೆ ಸಾಧ್ಯತೆ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಶ್ರೀರಂಗಪಟ್ಟಣದಲ್ಲೂ ಗಿಫ್ಟ್ ರಾಜಕಾರಣ ಶುರುವಾಗಿದೆ.

ಹದ್ದಿನ ಕಣ್ಣು ನೆಟ್ಟಿರುವಂತಹ ಚುನಾವಣಾಧಿಕಾರಿಗಳು ಸೀರೆ ಹಂಚಲು ರೆಡಿಯಾಗಿದ್ದಂತ ಬ್ಯಾಗ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಹೋಬಳಿಯ ನೇರಳೆ ಕೆರೆ ಗ್ರಾಮದಲ್ಲಿ ಮತದಾರರಿಗೆ ಹಂಚೋದಕ್ಕೆ 440 ಸೀರೆ, ಕುಂಕುಮ ಹಾಗೂ ಸ್ಟೀಲ್ ತಟ್ಟೆಯನ್ನು ಒಳಗೊಂಡಿರುವಂತ ಬ್ಯಾಗ್ ರೆಡಿ ಮಾಡಲಾಗಿತ್ತು.

ಈ ಮಾಹಿತಿಯನ್ನು ಆಧರಿಸಿ ರಾತ್ರಿ 7 ಗಂಟೆಯ ಸಮಯಕ್ಕೆ ಅರಕೆರೆ ಹೋಬಳಿಯ ನೇರಳೆಕೆರೆ ಗ್ರಾಮಕ್ಕೆ ಸೆಕ್ಟರ್ ಅಧಿಕಾರಿ ಚಂದ್ರಶೇಖರಯ್ಯ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಹಾಗೂ ಅರಕೆರೆ ಪೊಲೀಸ್ ಠಾಣೆ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.

ಈ ದಾಳಿಯ ವೇಳೆಯಲ್ಲಿ ಅರಕೆರೆಯ ನೇರಳೆಕೆರೆ ಗ್ರಾಮದಲ್ಲಿ 440 ಹ್ಯಾಂಡ್ ಬ್ಯಾಗ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಮತದಾರರಿಗೆ ಒಂದು ಸೀರೆ, ಅರಿಶಿನ ಕುಂಕುಮ ಹಾಗೂ ಒಂದು ಸ್ಟೀಲ್ ತಟ್ಟೆ ಇದೆ ಎಂಬುದಾಗಿ ತಿಳಿದು ಬಂದಿದೆ.

ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನು ಓದಿ –KPSC ಯಿಂದ 242 ಲೆಕ್ಕ ಸಹಾಯಕರ ನೇಮಕಾತಿ : ಇಂದಿನಿಂದ ಅರ್ಜಿ ಸಲ್ಲಿಕೆ

Share This Article
Leave a comment