ಐದು ವರ್ಷಗಳಲ್ಲಿ 4,200 ನಕ್ಸಲರ ಶರಣಾಗತಿ

Team Newsnap
1 Min Read

2015 ರಿಂದ 2020 ರ ಅವಧಿಯಲ್ಲಿ ನಕ್ಸಲ್ ಬಾಧಿತ ಜಿಲ್ಲೆಗಳಲ್ಲಿ ನಡೆದ ಹಿಂಸಾಕೃತ್ಯಗಳಲ್ಲಿ 380 ಭದ್ರತಾ ಸಿಬ್ಬಂದಿ, 1000 ನಾಗರಿಕರು ಮೃತಪಟ್ಟರೆ, 900ನಕ್ಸಲರು ಸತ್ತಿದ್ದಾರೆ. ಇದೇ ಅವಧಿಯಲ್ಲಿ4,200 ನಕ್ಸಲರು ಶರಣಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ಹೇಳಿವೆ.


ಮಾವೋವಾದಿಗಳಿಂದ ಹಿಂಸಾಕೃತ್ಯ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ. ನಕ್ಸಲರ ಚಟುವಟಿಕೆ 45 ಜಿಲ್ಲೆಗಳಿಗೆ ಸೀಮಿತವಾಗಿದೆ. ಆದರೂ 90 ಜಿಲ್ಲೆಗಳನ್ನು ಬಾಧಿತ ಪ್ರದೇಶಗಳು ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಭದ್ರತೆಗೆ ಸಂಬಂಧಿತ ಯೋಜನೆ ಜಾರಿಗೊಳಿಸುತ್ತಿದೆ ಎಂದು ಆ ಮೂಲಗಳು ತಿಳಿಸಿವೆ.


ನಕ್ಸಲ್ ಬಾಧಿತ ಆರು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ನಾಲ್ಕು ರಾಜ್ಯಗಳ ಉನ್ನತ ಅಧಿಕಾರಿಗಳೊಂದಿಗೆ ಭದ್ರತಾ ಪರಿಸ್ಥಿತಿ ಕುರಿತು ಕೇಂದ್ರ ಗೃಹಸಚಿವ ಅಮಿತ್ ಶಾ ನವದೆಹಲಿಯಲ್ಲಿ ಭಾನುವಾರ ಸಭೆ ನಡೆಸಿದರು.


ನಕ್ಸಲ್ ಬಾಧಿತ ರಾಜ್ಯಗಳಲ್ಲಿರುವ ಭದ್ರತಾ ಸ್ಥಿತಿ, ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ, ಈ ಪ್ರದೇಶಗಳಲ್ಲಿನ ಅಭಿವೃದ್ಧಿ ಚಟುವಟಿಕೆ ಬಗ್ಗೆ ಚರ್ಚೆ ನಡೆಯಿತು. ಒಡಿಶಾ, ತೆಲಂಗಾಣ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ ಮತ್ತು ಜಾರ್ಖಂಡ್ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಿದ್ದರು.


ಪಶ್ಚಿಮಬಂಗಾಳ, ಛತ್ತೀಗಡ, ಆಂಧಪ್ರದೇಶ ಹಾಗೂ ಕೇರಳ ರಾಜ್ಯಗಳ ಮುಖ್ಯಮಂತ್ರಿಗಳ ಬದಲಿಗೆ ಆ ರಾಜ್ಯಗಳ ಸಚಿವರು ಅಥವಾ ಉನ್ನತ ಅಧಿಕಾರಿಗಳು ಬಂದಿದ್ದರು ಎಂದು ಮೂಲಗಳು ಹೇಳಿವೆ.

Share This Article
Leave a comment