ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತಕ್ಕೆ ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮತದಾನಕ್ಕೆ ಸಲಕ ಸಿದ್ದತೆಗಳು ಪೂರ್ಣವಾಗಿವೆ.
4010 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ:
ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕುಗಳ ಗ್ರಾಮ ಪಂಚಾಯಿತಿಗಳಿಗೆ ನಾಳೆ ಮೊದಲ ಹಂತದಲ್ಲಿ 4010 ಅಭ್ಯರ್ಥಿಗಳ ಭವಿಷ್ಯಕ್ಕೆ ಮತದಾರರು ಮುದ್ರೆ ಒತ್ತಲಿದ್ದಾರೆ.
ಮೂರು ತಾಲೂಕುಗಳ 124 ಗ್ರಾಪಂಗಳಲ್ಲಿ 2011 ಸ್ಥಾನಗಳಿವೆ. ಇದರಲ್ಲಿ ಈಗಾಗಲೇ 364 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 1746 ಸ್ಥಾನಗಳಿಗೆ ಮತದಾನ ನಡೆಯಲಿದೆ.
ಮೀಸಲಾತಿ ವಿವರ:
ಜಿಲ್ಲೆಯ 7 ತಾಲೂಕುಗಳ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳ ಪೈಕಿ 564 ಪರಿಶಿಷ್ಟ ಜಾತಿ, 233 ಪರಿಶಿಷ್ಟ ಪಂಗಡ, 822 ಹಿಂದುಳಿದ ವರ್ಗ(ಎ),207 ಹಿಂದುಳಿದ ವರ್ಗ(ಬಿ) ಹಾಗೂ 1971 ಸಾಮಾನ್ಯ ಸದಸ್ಯ ಸ್ಥಾನಗಳಿವೆ. ಮೊದಲ ಹಂತದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಿಂದ 698 ಪರಿಶಿಷ್ಟ ಪಂಗಡ ಸ್ಥಾನಗಳಿಗೆ 152 ಹಿಂದುಳಿದ ವರ್ಗ(ಎ) 678, ಹಿಂದುಳಿದ ವರ್ಗ(ಬಿ) 195 ಹಾಗೂ ಸಾಮಾನ್ಯ 2287 ಮಂದಿ ಕಣದಲ್ಲಿದ್ದಾರೆ.
6. 67 ಲಕ್ಷ ಮತದಾರರಿಂದ ಹಕ್ಕು ಚಲಾವಣೆ:
ಜಿಲ್ಲೆಯಲ್ಲಿ ಒಟ್ಟು 13,47,466 ಮತದಾರರಿದ್ದಾರೆ. ಮೊದಲ ಹಂತದ ಮಂಡ್ಯ ತಾಲೂಕಿನಲ್ಲಿ ಪುರುಷರು 1, 16, 001 ಮಹಿಳೆಯರು 1,16, 990 ಇತರೆ 35, ಮದ್ದೂರು ತಾಲೂಕಿನಲ್ಲಿ1,12,762 ಪುರುಷರು, 1,15,699ಮಹಿಳೆಯರು, 20 ಇತರೆ ಹಾಗೂ ಮಳವಳ್ಳಿ ತಾಲೂಕಿನ 1,04,521ಪುರುಷರು, 1,01,815 ಇತರೆ 10ಮತದಾರರಿದ್ದು, ಮೊದಲ ಹಂತದಲ್ಲಿ ಒಟ್ಟು 6,67,853 ಮಂದಿ ಮತ ಚಲಾಯಿಸಲಿದ್ದಾರೆ.
1025ಮತಗಟ್ಟೆ:
ಮೊದಲ ಹಂತದ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕುಗಳಲ್ಲಿ 1025ಮತಗಟ್ಟೆ ಕೇಂದ್ರಗಳಿವೆ. ಮಂಡ್ಯ348, ಮದ್ದೂರು 349ಹಾಗೂ ಮಳವಳ್ಳಿಯಲ್ಲಿ 328ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮತಕೇಂದ್ರಗಳಿಗೆ ಸಿಬ್ಬಂದಿ ರವಾನೆ:
- ಡಿ. 22 ರಂದು ಮೊದಲನೇ ಹಂತದಲ್ಲಿ ಮಂಡ್ಯ, ಮದ್ದೂರು, ಮಳವಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯಲಿದೆ
- ಚುನಾವಣಾ ಕಾರ್ಯಕ್ಕೆ ಮತಗಟ್ಟೆ ಸಿಬ್ಬಂದಿಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ. ಮಂಡ್ಯ ತಾಲ್ಲೂಕಿನಿಂದ ಮದ್ದೂರು, ಮಳವಳ್ಳಿ ತಾಲ್ಲೂಕುಗಳಿಗೆ ನೇಮಕವಾಗಿರುವ ಮತಗಟ್ಟೆ ಸಿಬ್ಬಂದಿಗಳಿಗೆ ಪ್ರಯಾಣಿಸಲು ಮಂಡ್ಯ ತಾಲ್ಲೂಕಿನ ಮಸ್ಟರಿಂಗ್ ಕೇಂದ್ರದಿಂದ ಸಾರಿಗೆ ಬಸ್ ವ್ಯವಸ್ಥೆ ಇರುತ್ತದೆ.
ಕೊರೊನಾ: ಮೆಡಿಕಲ್ ಕಿಟ್:
- ಚುನಾವಣೆ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮತಗಟ್ಟೆ ಕೇಂದ್ರಗಳಲ್ಲಿ ಮೆಡಿಕಲ್ ಕಿಟ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ
ಪ್ರತ್ಯೇಕ ಕೋವಿಡ್ ಮತ ಕೇಂದ್ರ
ಪ್ರತಿ ಮತಗಟ್ಟೆ ಕೇಂದ್ರಗಳಲ್ಲಿ ಕೊರೊನಾ ಸೋಂಕಿತರಿಗೆ ಪ್ರತ್ಯೇಕ ಹೆಚ್ಚುವರಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೊದಲ ಹಂತದ ಮಂಡ್ಯ66, ಮದ್ದೂರು 67 ಹಾಗೂ ಮಳವಳ್ಳಿ 80 ಮತಗಟ್ಟೆಗಳನ್ನು ತೆರೆಯಲಾಗಿದೆ.
–
2 ನೇ ಹಂತ ಚುನಾವಣೆ: 4004ಅಂತಿಮ ಕಣದಲ್ಲಿ
ಮಂಡ್ಯ: ಎರಡನೇ ಹಂತದಲ್ಲಿ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಹಾಗೂ ನಾಗಮಂಗಲ ತಾಲೂಕುಗಳ 104 ಗ್ರಾಮ ಪಂಚಾಯಿತಿಗಳ 1786 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಅಂತಿಮವಾಗಿ4004 ಮಂದಿ ಅಂತಿಮ ಕಣದಲ್ಲಿದ್ದಾರೆ. ಪಾಂಡವಪುರ852, ಶ್ರೀರಂಗಪಟ್ಟಣ 953, ಕೆ.ಆರ್.ಪೇಟೆ 1404 ಹಾಗೂ ನಾಗಮಂಗಲದಲ್ಲಿ 795 ಮಂದಿ ಸ್ಪರ್ಧೆಯಲ್ಲಿದ್ದಾರೆ.
185 ಅವಿರೋಧ ಆಯ್ಕೆ:
ನಾಲ್ಕು ತಾಲೂಕುಗಳಲ್ಲಿ185 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಾಂಡವಪುರ 55, ಶ್ರೀರಂಗಪಟ್ಟಣ 26, ಕೆ.ಆರ್.ಪೇಟೆ 48 ಹಾಗೂ ನಾಗಮಂಗಲದಲ್ಲಿ 56 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ. ಇದರಲ್ಲಿ ಮೂರು ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸದ ಪರಿಣಾಮ ಖಾಲಿ ಉಳಿದಿದ್ದು, 1598 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಮೀಸಲಾತಿ ವಿವರ:
1598 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ ಮೀಸಲಾತಿಯಿಂದ 561, ಪಂಗಡ 154, ಹಿಂದುಳಿದ ವರ್ಗ(ಎ) 864, ಹಿಂದುಳಿದ ವರ್ಗ(ಬಿ) 227 ಹಾಗೂ ಸಾಮಾನ್ಯ ಮೀಸಲು ಕ್ಷೇತ್ರಗಳಿಂದ 2198 ಅಭ್ಯರ್ಥಿಗಳಿದ್ದಾರೆ.
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
- ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
More Stories
KRS ಡ್ಯಾಂನಿಂದ ಕೃಷಿಗೆ ನೀರು: ವೇಳಾಪಟ್ಟಿ ಪ್ರಕಟ
ಐಶ್ವರ್ಯಗೌಡ ವಂಚನೆ ಪ್ರಕರಣ: ಶಾಸಕ ನರೇಂದ್ರಸ್ವಾಮಿಯ ಕೈವಾಡ ಶಂಕೆ, ಅನ್ನದಾನಿಯ ಗಂಭೀರ ಆರೋಪ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು