ಮಂಡ್ಯ: ತಮಿಳುನಾಡಿಗೆ ನೀರು ಬಿಡುಗಡೆ ಪ್ರಮಾಣದಲ್ಲಿ ದಿನೇ ದಿನೇ ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗುತ್ತಿದೆ .
ಸೋಮವಾರ ಬೆಳಿಗ್ಗೆ ಕೆಆರ್‌ಎಸ್ ಡ್ಯಾಂನಿಂದ (ತಮಿಳುನಾಡಿಗೆ 4,105 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ನಿನ್ನೆ (ಭಾನುವಾರ) 3,838 ಕ್ಯೂಸೆಕ್ ಹಾಗೂ ಮೊನ್ನೆ (ಶನಿವಾರ) 2,973 ಕ್ಯೂಸೆಕ್ ನೀರು ಹರಿಸಲಾಗಿತ್ತು.
ಇಂದು ಏಕಾಏಕಿ 4,105 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನಾಲೆ ಹಾಗೂ ತಮಿಳುನಾಡಿಗೆ ಸೇರಿ ಕೆಆರ್‌ಎಸ್ ಡ್ಯಾಂನಿಂದ 6,716 ಕ್ಯೂಸೆಕ್ ಹೊರ ಹರಿವು ಇದೆ.
ಕಬಿನಿ ಜಲಾಶಯದಿಂದಲೂ ತಮಿಳುನಾಡಿಗೆ ನೀರನ್ನು ಹರಿಸಲಾಗುತ್ತಿದೆ. ಕಬಿನಿಯಿಂದ 2,500 ಕ್ಯೂಸೆಕ್ ನೀರು ತಮಿಳುನಾಡಿಗೆ ಹೋದರೆ, ಕೆಆರ್‌ಎಸ್ ಹಾಗೂ ಹಾಗೂ ಕಬಿನಿಯಿಂದ ನದಿ ಮೂಲಕ ತಮಿಳುನಾಡಿಗೆ 6,605 ನೀರು ಬಿಡುಗಡೆಯಾಗುತ್ತಿದೆ.
ಇದನ್ನು ಓದಿ –ಸೆ. 29ರಂದು ಅಖಂಡ ಕರ್ನಾಟಕ ಬಂದ್ : ವಾಟಾಳ್ ಘೋಷಣೆ
ಕೆಆರ್‌ಎಸ್ ಅಣೆಕಟ್ಟು ನೀರಿನ ಮಟ್ಟ:
- ಗರಿಷ್ಟ ಮಟ್ಟ : 124.80 ಅಡಿಗಳು
- ಇಂದಿನ ಮಟ್ಟ : 96.70 ಅಡಿಗಳು
- ಗರಿಷ್ಠ ಸಂಗ್ರಹ : 49.452 ಟಿಎಂಸಿ
- ಇಂದಿನ ಸಂಗ್ರಹ : 20.334 ಟಿಎಂಸಿ
- ಒಳಹರಿವು : 5,993 ಕ್ಯೂಸೆಕ್
- ಹೊರಹರಿವು : 6,716 ಕ್ಯೂಸೆಕ್
More Stories
ಮಂಡ್ಯದಲ್ಲಿ ಪುನೀತ್ ರಾಜ್ಕುಮಾರ್ ಹೆಸರಲ್ಲಿ ವಂಚನೆ
ದೋಸೆ ಪ್ರಿಯರಿಗೆ ಸಿಹಿ ಸುದ್ದಿ: ಶೀಘ್ರವೇ ಕೆಎಂಎಫ್ ನಿಂದ ‘ನಂದಿನಿ ದೋಸೆ ಹಿಟ್ಟು’ ಮಾರುಕಟ್ಟೆಗೆ
ಹುಬ್ಬಳ್ಳಿ ಬೈಪಾಸ್ನಲ್ಲಿ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ