ಇಂದಿನಿಂದ ದೇಶಾದ್ಯಂತ 392 ವಿಶೇಷ ರೈಲು ಸಂಚಾರ

Team Newsnap
1 Min Read

ಈಗಾಗಲೇ ದೇಶಾದ್ಯಂತ ದಸರಾ ಉತ್ಸವ ಆರಂಭವಾಗಿದೆ. ನವರಾತ್ರಿ ಬೆನ್ನಲ್ಲೇ ಒಂದರ ಹಿಂದೊಂದರಂತೆ ಸಾಲಾಗಿ ಹಬ್ಬಗಳು ಇರುವುದರಿಂದ ಭಾರತೀಯ ರೈಲ್ವೆ ಇಲಾಖೆ ಇಂದಿನಿಂದ ನವೆಂಬರ್ 30ರವರೆಗೆ 392 ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಿದೆ.

ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಕೊರೋನಾ ಹಿನ್ನೆಲೆಯಲ್ಲಿ ಹೆಚ್ಚಿನ ಜನದಟ್ಟಣೆಯನ್ನು ತಡೆಯುವ ಉದ್ದೇಶದಿಂದ ವಿಶೇಷ ರೈಲು ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಕೊಲ್ಕತ್ತಾ, ವಾರಾಣಸಿ, ಲಕ್ನೋ, ಪಾಟ್ನಾ ಸೇರಿದಂತೆ ಹಲವು ನಗರಗಳಿಗೆ ವಿಶೇಷ ರೈಲುಗಳ ವ್ಯವಸ್ಥೆ ಇಂದಿನಿಂದ ಆರಂಭವಾಗಿದೆ.

ಇಂದಿನಿಂದ (ಅ. 20) ನವೆಂಬರ್ 30ರವರೆಗೆ 196 ಜೋಡಿ ರೈಲುಗಳು ದೇಶದ ವಿವಿಧ ರಾಜ್ಯಗಳಿಗೆ ಸಂಚಾರ ಮಾಡಲಿವೆ. ಲಾಕ್​ಡೌನ್ ಬಳಿಕ ರೈಲು ಸಂಚಾರವನ್ನು ಆರಂಭಿಸಲಾಗಿದೆ. ಈಗಾಗಲೇ ಸಂಚರಿಸುತ್ತಿರುವ ರೈಲುಗಳ ಜೊತೆಗೆ ವಿಶೇಷ ರೈಲುಗಳು ಹೆಚ್ಚುವರಿಯಾಗಿ ಸಂಚರಿಸಲಿವೆ. ಹಬ್ಬದ ಸಮಯದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಬಾರದು ಎನ್ನುವ ಕಾರಣಕ್ಕಾಗಿ ಹೆಚ್ಚುವರಿ ರೈಲು ಸಂಚಾರ ಆರಂಭಿಸಲಾಗುತ್ತಿದೆ.

ಎಕ್ಸ್‌ಪ್ರೆಸ್ ರೈಲುಗಳ ಟಿಕೆಟ್ ದರಕ್ಕೆ ಹೋಲಿಸಿದರೆ ವಿಶೇಷ ರೈಲುಗಳ ದರವು ಶೇ. 10ರಿಂದ 30ರವರೆಗೂ ಹೆಚ್ಚಿರಲಿದೆ. ಐಆರ್​ಸಿಟಿಸಿ ಮತ್ತು ಪಿಆರ್​ಎಸ್​ ಟಿಕೆಟ್​ ಕೌಂಟರ್​ಗಳ ಮೂಲಕವೂ ವಿಶೇಷ ರೈಲುಗಳ ಟಿಕೆಟ್ ಬುಕ್ ಮಾಡಬಹುದು. ಪ್ರಯಾಣಿಕರು ಯಾವ ಬೋಗಿಯನ್ನು ಬುಕ್ ಮಾಡುತ್ತಾರೆ ಎಂಬುದರ ಆಧಾರದಲ್ಲಿ ದರ ನಿಗದಿಯಾಗಲಿದೆ.

ಕೊಲ್ಕತ್ತಾ, ಪಾಟ್ನಾ, ವಾರಣಾಸಿ, ಲಕ್ನೋ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ವಿಶೇಷ ರೈಲುಗಳು ಸಂಚಾರ ನಡೆಸಲಿವೆ.

ದುರ್ಗಾ ಪೂಜೆ, ದಸರಾ, ದೀಪಾವಳಿ, ಸೇರಿದಂತೆ ವಿವಿಧ ಹಬ್ಬಗಳ ಹಿನ್ನೆಲೆಯಲ್ಲಿ ವಿಶೇಷ ರೈಲು ಸಂಚಾರ ನಡೆಸಲಿವೆ. ನವೆಂಬರ್​ 30ರ ನಂತರ ವಿಶೇಷ ರೈಲುಗಳ ಸಂಚಾರ ಸ್ಥಗಿತಗೊಳ್ಳಲಿದೆ.

ವಿಶೇಷ ರೈಲುಗಳು ಪ್ರತಿ ಗಂಟೆಗೆ 55 ಲಕಿ.ಮೀ ವೇಗದಲ್ಲಿ ಸಂಚಾರ ನಡೆಸಲಿವೆ. ಪ್ರಾದೇಶಿಕ ರೈಲ್ವೆ ಇಲಾಖೆಗಳು ಆಯಾ ಭಾಗದ ರೈಲಿನ ವೇಳಾಪಟ್ಟಿಯನ್ನು ಪ್ರಕಟಿಸಲಿವೆ ಎಂದು ರೈಲ್ವೆ‌ ಇಲಾಖೆ ತಿಳಿಸಿದೆ.

Share This Article
Leave a comment