November 21, 2024

Newsnap Kannada

The World at your finger tips!

money2

ಚುನಾವಣೆ ಘೋಷಣೆ ಬಳಿಕ ಒಂದೇ ದಿನ 36 ಕೋಟಿ ಜಪ್ತಿ

Spread the love

ಬೆಂಗಳೂರು : ರಾಜ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣಾ ಅಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ನೀತಿ ಸಂಹಿತೆ ಜಾರಿಯಾದ ಬಳಿಕ ಮೊದಲ ಬಾರಿಗೆ 9 ಲಕ್ಷ ರು. ಮೌಲ್ಯದ ವಜ್ರಗಳನ್ನು ಜಪ್ತಿ ಮಾಡಲಾಗಿದೆ.

ಕಾರ್ಯನಿರ್ವಹಿಸುತ್ತಿರುವ ವಿವಿಧ ತನಿಖಾ ತಂಡಗಳು ಚುನಾವಣಾ ಅಕ್ರಮ ತಡೆಯುವ ನಿಟ್ಟಿನಲ್ಲಿ 9.64 ಕೋಟಿ ರು. ನಗದು ಸೇರಿದಂತೆ 36.41 ಕೋಟಿ ರು. ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ .

ಮುಖ್ಯ ಚುನಾವಣಾಧಿಕಾರಿ ಕಚೇರಿ 15.67 ಲಕ್ಷ ರು. ಉಚಿತ ಉಡುಗೊರೆ, 1.63 ಕೋಟಿ ರು. ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ.

22.85 ಕೋಟಿ ರು. ಮೌಲ್ಯದ 7.20 ಲಕ್ಷ ಲೀಟರ್‌ ಮದ್ಯ, 53.37 ಲಕ್ಷ ರು. ಮೌಲ್ಯದ 52.12 ಕೆಜಿ ಮಾದಕ ವಸ್ತುಗಳು, 1.27 ಕೋಟಿ ರು. ಮೌಲ್ಯದ 2 ಕೆಜಿ ಚಿನ್ನ, 9 ಲಕ್ಷ ರು. ಮೌಲ್ಯದ ವಜ್ರಗಳನ್ನು ಜಪ್ತಿ ಮಾಡಲಾಗಿದೆ.

ನಗದು, ಮದ್ಯ, ಮಾದಕ ವಸ್ತುಗಳು, ಉಚಿತ ಉಡುಗೊರೆಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 402 ಎಫ್‌ಐಆರ್‌ ದಾಖಲಿಸಲಾಗಿದೆ.ಬಿಗ್ ಬಾಸ್ ಖ್ಯಾತಿ ಸೋನುಗೌಡ ಬಂಧನ

ವಿವರ :

  • ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ 38 ಲಕ್ಷ ರು. ನಗದು,
  • ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 12.68 ಲಕ್ಷ ರು. ನಗದು,
  • ಬೆಂಗಳೂರು ನಗರದ ಸಂಪಗಿರಾಮನಗರದಲ್ಲಿ 28.75 ಲಕ್ಷ ರು. ನಗದು,
  • ಕೋರಮಂಗಲದಲ್ಲಿ ಪ್ರತ್ಯೇಕವಾಗಿ 24 ಲಕ್ಷ ರು. ನಗದು ಮತ್ತು 86.50 ಲಕ್ಷ ರು. ನಗದು ,
  • ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 33 ಲಕ್ಷ ರು. ಮೌಲ್ಯದ ವಿಮಲ್‌ ಪಾನ್ ಮಸಾಲ ಗುಟ್ಕಾದ 180 ಚೀಲಗಳು,
  • ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 13.20 ಲಕ್ಷ ರು. ಮೌಲ್ಯದ ಚಿನ್ನಾಭರಣ,
  • ಧಾರವಾಡ ಕ್ಷೇತ್ರದಲ್ಲಿ 38.50 ಲಕ್ಷ ರು. ಮೌಲ್ಯದ ಚಿನ್ನಾಭರಣ,
  • ಬೆಂಗಳೂರಲ್ಲಿ 71.17 ಲಕ್ಷ ರು. ಮೌಲ್ಯದ ಚಿನ್ನ, 9 ಲಕ್ಷ ರು. ಮೌಲ್ಯದ 21.17 ಕ್ಯಾರೆಟ್‌ ವಜ್ರ

Copyright © All rights reserved Newsnap | Newsever by AF themes.
error: Content is protected !!