ಚುನಾವಣೆ ಕಾವು ಏರುತ್ತಿದೆ ಮತದಾರರ ಸೆಳೆಯಲು ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ.
ಮಂಡ್ಯದಲ್ಲಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 35 ಲಕ್ಷ ರೂ ಮೌಲ್ಯದ ಕುಕ್ಕರ್ ಗಳನ್ನು ನಾಗಮಂಗಲ ತಾಲೂಕಿನ ಕದಬಳ್ಳಿ ಚೆಕ್ ಪೋಸ್ಟ್ ಬಳಿ ಜಪ್ತಿ ಮಾಡಲಾಗಿದೆ.
ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಕಂಟೇನರ್ ಲಾರಿನಲ್ಲಿ ಸಾಗಿಸುತ್ತಿದ್ದ ವೇಳೆ ತಪಾಸಣೆ ಮಾಡಿದಾಗ ಕುಕ್ಕರ್ ಗಳು ಪತ್ತೆಯಾಗಿವೆ.
ಶೃಂಗೇರಿ ಶಾಸಕ ಜಿ.ಡಿ ರಾಜೇಗೌಡ ಅವರಿಗೆ ಸೇರಿದ ಕುಕ್ಕರ್ ಗಳು ಇವಾಗಿದ್ದು ಕ್ಷೇತ್ರದ ಮತದಾರರಿಗೆ ಹಂಚಲು ಬಾಳೆಹೊನ್ನೂರಿನಿಂದ ಖರೀದಿಸಿ ತೆಗೆದುಕೊಂಡು ಬರುತ್ತಿದ್ದರು. ಪೊಲೀಸರು ತಪಸಾಣೆ ನಡೆಸಿದಾಗ ಕುಕ್ಕರ್ ಮತ್ತು ಹಣವನ್ನು ಜಪ್ತಿ ಮಾಡಲಾಗಿದೆ.
ಈ ವೇಳೆ ಶಾಸಕ ಹಾಗೂ ಅಂಗಡಿ ಮಾಲೀಕ ವಿರುದ್ಧ ಬಿಂಡಿಗನವಿಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಇದನ್ನು ಓದಿ –ಗ್ರಾಮ ಲೆಕ್ಕಿಗ ಯುವತಿ ನೇಣು ಬಿಗಿದುಕೊಂಡ ಆತ್ಮಹತ್ಯೆ
More Stories
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಐದು ಷರತ್ತು
ಒಡಿಶಾ ರೈಲು ಅಪಘಾತ: ಸಿಬಿಐ ತನಿಖೆಗೆ ಶಿಫಾರಸ್ಸು -ಕೇಂದ್ರ ರೈಲ್ವೆ ಸಚಿವ ಪ್ರಕಟ
ಮಂಡ್ಯ : ಲಾರಿಗೆ ಕಾರು ಡಿಕ್ಕಿ – ನೆಲಮಂಗಲದ ನಾಲ್ವರು ಸಾವು