ಕಾವೇರಿ ನದಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಶೇ 35 ರಷ್ಟು ಮಳೆ ಕೊರತೆ : ಕಾದಿವೆ ಆಘಾತಕಾರಿ ದಿನಗಳು

Team Newsnap
2 Min Read

ಮಡಿಕೇರಿ : ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಪ್ರತಿಭಟನೆಗಳು ಮುಂದುವರೆದಿವೆ. ಜೊತೆಗೆ ನಾಳೆ ಕರ್ನಾಟಕ ಬಂದ್ ಗೂ ಕರೆ ನೀಡಿದ ಬೆನ್ನಲ್ಲೇ ಕಾವೇರಿ ಹಾಗೂ ಅದರ ಉಪನದಿಗಳನ್ನು ಅವಲಂಬಿಸಿರುವ ಜಿಲ್ಲೆಗಳು ತೀವ್ರ ಮಳೆ ಕೊರತೆ ಎಷ್ಟಿದೆ ಎಂಬ ಅಂಕಿಅಂಶಗಳನ್ನು ಗಮನಿಸಿದೆ ಆಘಾತಕಾರಿ ದಿನಗಳು ಮುಂದೆ ಕಾದಿವೆ.

ನೈಋತ್ಯ ಮಾನ್ಸೂನ್ ಕೊನೆಗೊಳ್ಳಲು ಕೆಲವೇ ದಿನಗಳು ಬಾಕಿ ಇದೆ, ಬಹುತೇಕ ಜಿಲ್ಲೆಗಳು ಶೇ 35 ಕ್ಕಿಂತ ಹೆಚ್ಚು ಮಳೆ ಕೊರತೆಯನ್ನು ಎದುರಿಸುತ್ತಿವೆ.

ಅಂಕಿಅಂಶಗಳ ಪ್ರಕಾರ, ಕೊಡಗು ಜಿಲ್ಲೆಯ ಎರಡು ತಾಲ್ಲೂಕುಗಳು ಸೇರಿದಂತೆ ರಾಜ್ಯದ ನಾಲ್ಕು ತಾಲ್ಲೂಕುಗಳಲ್ಲಿ ಜೂನ್ 1 ಮತ್ತು ಸೆಪ್ಟೆಂಬರ್ 27 ರ ನಡುವೆ ಶೇ 50 ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿದೆ.

ರಾಜ್ಯ ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ಸೆಪ್ಟೆಂಬರ್ 22 ರವರೆಗಿನ ಅಂಕಿಅಂಶಗಳು, ಬರಗಾಲದ ನಡುವೆಯೂ ಬಿತ್ತನೆ ಚಟುವಟಿಕೆಗಳು ಉತ್ತಮವಾಗಿವೆ ಎಂಬುದನ್ನು ಸೂಚಿಸಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಅಂಕಿಅಂಶಗಳ ಪ್ರಕಾರ, ಜೂನ್ 1 ಮತ್ತು ಸೆಪ್ಟೆಂಬರ್ 27 ರ ನಡುವೆ ಕೊಡಗಿನಲ್ಲಿ ಶೇ -42 ಮಳೆ ದಾಖಲಾಗಿದೆ. ಇದು ಬಳ್ಳಾರಿ (ಶೇ -48) ಜಿಲ್ಲೆಯ ನಂತರ ಅತಿಹೆಚ್ಚು ಮಳೆ ಕೊರತೆ ದಾಖಲಿಸಿದ ಜಿಲ್ಲೆಯಾಗಿದೆ. ವಿರಾಜಪೇಟೆ ತಾಲ್ಲೂಕು (-59%) ಮತ್ತು ಪೊನ್ನಂಪೇಟೆ (-50%) ಕೊಡಗಿನಲ್ಲಿ ಹೆಚ್ಚು ಮಳೆ ಕೊರತೆ ಎದುರಿಸುತ್ತಿರುವ ತಾಲ್ಲೂಕುಗಳಾಗಿವೆ.
ಕಾವೇರಿಯ ಉಪನದಿ ಹೇಮಾವತಿ ಹರಿಯುವ ಚಿಕ್ಕಮಗಳೂರಿನ ಮೂಡಿಗೆರೆ ಜಿಲ್ಲೆಯಲ್ಲಿ ಶೇ -30 ಮಳೆ ದಾಖಲಾಗಿದೆ.

ಮಳೆಯ ಕೊರತೆ ಎಷ್ಟಿದೆ? :

ಮಲೆನಾಡು ಜಿಲ್ಲೆಗಳಾದ ಕೊಡಗು (-42%), ಚಿಕ್ಕಮಗಳೂರು (-39%), ಮತ್ತು ಶಿವಮೊಗ್ಗ (-38%), ಮುಂಗಾರು ಅವಧಿಯಲ್ಲಿ ತೀವ್ರ ಮಳೆ ಕೊರತೆ ಎದುರಿಸಿವೆ.

ಕಾವೇರಿ ಮತ್ತು ಅದರ ಉಪನದಿಗಳ ನೀರನ್ನು ಅವಲಂಬಿಸಿರುವ ಹಾಸನ (-28%), ಮೈಸೂರು (-23%), ಮಂಡ್ಯ (-18%), ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ -17% ಮಳೆ ಕೊರತೆ ದಾಖಲಾಗಿದೆ

ಬಿತ್ತನೆ ಎಷ್ಟಾಗಿದೆ ? :
ರಾಜ್ಯ ಕೃಷಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್ 22 ರವರೆಗೆ, ನೈಋತ್ಯ ಮುಂಗಾರು ಅವಧಿಯಲ್ಲಿ ಶೇ 89ರ ಬಿತ್ತನೆ ಗುರಿ ಸಾಧಿಸಲಾಗಿದೆ. ಇದು ಶೇ 91ರ ನೀರಾವರಿ ಕೃಷಿ ಭೂಮಿಯನ್ನು ಒಳಗೊಂಡಿದೆ.ಹಸಿರು ಕ್ರಾಂತಿ ಪಿತಾಮಹ , ಕೃಷಿ ತಜ್ಞ ಸ್ವಾಮಿನಾಥನ್ ನಿಧನ

ಹಾಸನದಲ್ಲಿ ಶೇ 98, ಶಿವಮೊಗ್ಗ ಶೇ 92, ಚಿಕ್ಕಮಗಳೂರು ಶೇ 84, ಮೈಸೂರು ಶೇ 80, ಮಂಡ್ಯ ಶೇ 78, ಚಾಮರಾಜನಗರ ಶೇ 72, ಕೊಡಗಿನಲ್ಲಿ ಶೇ 69ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.

Share This Article
Leave a comment