November 15, 2024

Newsnap Kannada

The World at your finger tips!

veerappan

ವೀರಪ್ಪನ್ ಆಟ್ಟಹಾಸಕ್ಕೆ ಬಲಿಯಾಗಿದ್ದ ಪೊಲೀಸ್ ಅಧಿಕಾರಿಗಳ 31 ನೇ ವರ್ಷದ ಪುಣ್ಯಸ್ಮರಣೆ

Spread the love

ಹನೂರು :- 1992ರ ಆಗಸ್ಟ್ 14 ರಂದು ಹನೂರು ತಾಲೂಕಿನ ಮಲೈ ಮಹದೇಶ್ವರ ಅರಣ್ಯ ವಲಯದಲ್ಲಿ ವೀರಪ್ಪನ್ ಆಟ್ಟಹಾಸಕ್ಕೆ ಬಲಿಯಾಗಿದ್ದ ಆರು ಜನ ಪೊಲೀಸ್ ಸಿಬ್ಬಂದಿಗಳ ಸ್ಮರಣಾರ್ಥ ದಿನವಾಗಿ ಮಿಣ್ಯo ಸಮೀಪದಲ್ಲಿರುವ ಅರಣ್ಯದೊಳಗೆ ಅವರ ನೆನಪಿನರ್ಥವಾಗಿ ಕೃತ್ಯ ನಡೆದ ಸ್ಥಳದಲ್ಲಿರುವ ಸ್ಮಾರಕ ಸ್ಥoಭಕ್ಕೆ ಸಂಬಂದಿಕರುಗಳು ಹಾಗು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗು ಅರಣ್ಯ ಅಧಿಕಾರಿಗಳು ಸಾರ್ವಜನಿಕರು ಸೇರಿ ಸರ್ಕಾರದ ವತಿಯಿಂದ ಗೌರವ ಪೂರ್ವಕ ಶ್ರದ್ದಾoಜಲಿ ಅರ್ಪಿಸಲಾಯಿತು.

ಈ ವೇಳೆಯಲ್ಲಿ ಮಾತನಾಡಿದ ನಿವೃತ್ತ ಎ ಎಸ್ ಪಿ ಉಮೇಶ್ ರವರು. ಕಳೆದ 31 ವರ್ಷದ ಹಿಂದೆ ಇದೆ ದಿನದಂದು ಮಾರನೆಯ ದಿನ ಸ್ವತಂತ್ರ ದಿನಾಚರಣೆಯ ಅಂಗವಾಗಿ ಎಲ್ಲರೂ ಸಂತೋಷದ ದಿನ ಆಚರಣೆ ಮಾಡಲು ಕಾರ್ಯ ಪ್ರವೃತ್ತಿಯಲ್ಲಿ ಇದ್ದ ಸಂದರ್ಭದಲ್ಲಿ ನಮ್ಮ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಾವಿನ ಸುದ್ದಿ ಕೇಳಿ ನಾವೆಲ್ಲ ದಿಗ್ಬ್ರಮೆಯಾಗಿದ್ದೆವು ಎಂದರು.

ಆ ದಿನವೂ ಇಡೀ ರಾಜ್ಯವೇ ಶೋಕದ ಆಚರಣೆಯಲ್ಲಿ ಮುಳುಗಿತ್ತು.ಮಾರ್ಟಳ್ಳಿ. ಹುಗ್ಯ. ಮಹದೇಶ್ವರ ಬೆಟ್ಟ. ಸತ್ತಿಮಂಗಲ. ಈ ಜಾಗಗಳು ವೀರಪ್ಪನ್ ನೆಚ್ಚಿನ ತಾಣಗಳು ಆಗಿದ್ದವು. ಈ ಭಾಗಕ್ಕೆ ಪೊಲೀಸ್ ಇಲಾಖೆ ಹಾಗು ಅರಣ್ಯ ಇಲಾಖೆಯ ಅಧಿಕಾರಿಗಳು ಕೆಲಸ ಮಾಡಲು ಭಯ ಪಟ್ಟು ಎಷ್ಟೋ ಜನರು ತಮ್ಮ ಕೆಲಸವನ್ನೇ ತೊರೆದಿದ್ದಾರೆ. ಆದರೆ ಆ ಸಂದರ್ಭದಲ್ಲಿ ಈ ಭಾಗದಲ್ಲಿ ಕೆಲಸ ಮಾಡಿ ಕಾಡುಗಳ್ಳ ವೀರಪ್ಪನ್ ದಾಳಿಗೆ ಹುತಾತ್ಮರಾದ ಪೊಲೀಸ್ ಅಧಿಕ್ಷಕ ಟಿ ಹರಿಕೃಷ್ಣ.ಪಿಎಸ್ಐ ಶಕೀಲ್ ಅಹ್ಮದ್.ಸಿ ಎಂ ಕಾಳಪ್ಪ. ಪಿಎಸ್ಐ ಸೋಮಪ್ಪ ಬೆಳಗೊಂಡ. ಸುಂದರ್. ಕೆಎಂ ಅಪ್ಪಚ್ಚು. ಇವೆರೆಲ್ಲರೂ ನಿಜಕ್ಕೂ ಬಹಳ ಧೈರ್ಯವಂತರು ಈ ಮಹನೀಯರನ್ನು ಪ್ರತಿ ದಿನ ಸ್ಮರಣೆ ಮಾಡುವ ಕರ್ತವ್ಯ ನಮ್ಮದು ಎಂದರು.

ಇದೆ ಸಂದರ್ಭದಲ್ಲಿ ಹುತಾತ್ಮ ಅಧಿಕಾರಿಗಳ ಸಂಬಂದಿಕರುಗಳು ಸ್ಥಳಕ್ಕೆ ಆಗಮಿಸಿ ಸ್ಮಾರಕ ಸ್ಥoಬಕ್ಕೆ ಪೂಜೆ ಸಲ್ಲಿಸಿ ಹೂ ಗುಚ್ಛ ಇಟ್ಟು ಶ್ರದ್ದಾಂಜಲಿ ಅರ್ಪಿಸಲಾಯಿತು. ಹುತಾತ್ಮ ಪೊಲೀಸ್ ಅಧಿಕಾರಿಗಳ ಸಂಬಂಧಿಕರಿಗೆ ಸನ್ಮಾನಿಸಿ ಗೌರವಿಸಿದರು.ಆಕ್ಷೇಪಾರ್ಹ ಪದ ಬಳಸಿದ್ದ ನಟ ಉಪೇಂದ್ರಗೆ ರಿಲೀಫ್.- ಬುದ್ಧಿವಂತ ಸಧ್ಯಕ್ಕೆ ಬಚಾವ್ ?

ಇದೇ ಸಂದರ್ಭದಲ್ಲಿ ಕೊಳ್ಳೇಗಾಲ ಡಿವೈಎಸ್ಪಿ ಸೋಮೇಗೌಡ. ರಾಮಾಪುರ ಪೊಲೀಸ್ ಠಾಣಿಯ ವೃತ್ತ ನೀರಿಕ್ಷಕರು ಸಂತೋಷ್ ಕಶ್ಯಪ್. ಪಿಎಸ್ಐ ರಾಧ. ಹುಗ್ಯ ವಲಯ ಅರಣ್ಯಧಿಕಾರಿ ಗಿರೀಧರ್. ಹನೂರು ತಾಲೂಕು ಅರೋಗ್ಯಧಿಕಾರಿ ಡಾ ಪ್ರಕಾಶ್. ಹಾಗು ರಾಮಪುರ ಪೊಲೀಸ್ ಠಾಣಿಯ ಸಿಬ್ಬಂದಿಗಳು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗು ಇನ್ನಿತರರು ಭಾಗಿಯಾಗಿದ್ದರು.

ವರದಿ :- ನಾಗೇಂದ್ರ ಪ್ರಸಾದ್

Copyright © All rights reserved Newsnap | Newsever by AF themes.
error: Content is protected !!