January 12, 2025

Newsnap Kannada

The World at your finger tips!

karona

ರಾಜ್ಯದಲ್ಲಿ ಮಂಗಳವಾರ 31,830 ಕೊರೊನಾ ಪಾಸಿಟಿವ್ 180 ಜನ ಬಲಿ

Spread the love
  • ಮೈಸೂರು 2,042, ತುಮಕೂರು 1,196
  • ಬೆಂಗಳೂರಿನಲ್ಲಿ 17,550 ಪಾಸಿಟಿವ್, 97 ಬಲಿ
  • 3 ಲಕ್ಷ ದಾಟಿದ ಸಕ್ರಿಯ ಪ್ರಕಣಗಳ ಸಂಖ್ಯೆ
  • ಒಟ್ಟು ಸೋಂಕಿತರ ಸಂಖ್ಯೆ 14 ಲಕ್ಷಕ್ಕೆ ಏರಿಕೆ

ರಾಜ್ಯದಲ್ಲಿ ಕೊರೊನಾ ಆರ್ಭಟ ನಾಗಾಲೋಟದಲ್ಲಿ ಸಾಗಿದೆ. ಮಂಗಳವಾರವೂ ಸಹ ರಾಜ್ಯದಲ್ಲಿ 31,830 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 180 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 3 ಲಕ್ಷ ಮೀರಿದೆ, ಬೆಂಗಳೂರಿನಲ್ಲಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಬೆಂಗಳೂರಿನ ಸ್ಥಿತಿ ಕ್ಷಣ ಕ್ಷಣಕ್ಕೂ ಭಯಾನಕವಾಗುತ್ತಿದೆ. ಇಂದು ಬೆಂಗಳೂರಿನಲ್ಲಿ 17,550 ಜನರಿಗೆ ಕೊರೊನಾ ಸೋಂಕು ತಗುಲಿದೆ ಹಾಗೂ 97 ಜನ ಸಾವನ್ನಪ್ಪಿದ್ದಾರೆ.

ಸದ್ಯ ರಾಜಧಾನಿಯಲ್ಲಿ 2,06,223 ಸಕ್ರಿಯ ಪ್ರಕರಣಗಳಿದೆ, ಬೆಡ್ ಮತ್ತು ಆಕ್ಸಿಜನ್ ಕೊರತೆಯಿಂದ ಜನ ನರಳುವುದು ಮತ್ತು ಸಾಯುವುದು ಸಹಜವಾಗಿದೆ.

  • ರಾಜ್ಯದಲ್ಲಿ 3,01,899 ಸಕ್ರಿಯ ಪ್ರಕರಣಗಳಿವೆ.
  • 2,063 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
  • ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 14,00,775ಕ್ಕೆ ಏರಿಕೆಯಾಗಿದೆ.
  • ಇಂದು 10,793 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
  • ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.18.71 ಮತ್ತು ಮರಣ ಪ್ರಮಾಣ ಶೇ.0.56ಕ್ಕೆ ಏರಿಕೆಯಾಗಿದೆ.
  • ಈ ವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 14,807ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ವಿವರ

ಬಾಗಲಕೋಟೆ 283
ಬಳ್ಳಾರಿ 907
ಬೆಳಗಾವಿ 219
ಬೆಂಗಳೂರು ಗ್ರಾಮಾಂತರ 599
ಬೆಂಗಳೂರು ನಗರ 17550
ಬೀದರ್328
ಚಾಮರಾಜನಗರ 212
ಚಿಕ್ಕಬಳ್ಳಾಪುರ 544
ಚಿಕ್ಕಮಗಳೂರು 275
ಚಿತ್ರದುರ್ಗ 145
ದಕ್ಷಿಣಕನ್ನಡ 486
ದಾವಣಗೆರೆ 300
ಧಾರವಾಡ 423
ಗದಗ119
ಹಾಸನ 503
ಹಾವೇರಿ 99
ಕಲಬುರಗಿ 772
ಕೊಡಗು373
ಕೋಲಾರ 548
ಕೊಪ್ಪಳ 382
ಮಂಡ್ಯ 737
ಮೈಸೂರು 2042
ರಾಯಚೂರು 736
ರಾಮನಗರ 169
ಶಿವಮೊಗ್ಗ 256
ತುಮಕೂರು 1196
ಉಡುಪಿ 477
ಉತ್ತರಕನ್ನಡ 205
ವಿಜಯಪುರ 531
ಯಾದಗಿರಿ 414

Copyright © All rights reserved Newsnap | Newsever by AF themes.
error: Content is protected !!