December 23, 2024

Newsnap Kannada

The World at your finger tips!

acb

ಚಾಮರಾಜನಗರದ DHO ಕಚೇರಿಯಲ್ಲಿ 3 ಸಾವಿರ ರು ಲಂಚ ಸ್ವೀಕಾರ – ACBಯಿಂದ FDA ಬಂಧನ

Spread the love

ಚಾಮರಾಜನಗರ – ಉಡುಪಿಯ ಏಜೆನ್ಸಿ ಸಾಯಿ ಸೆಕ್ಯೂರಿಟಿ ಅವರಿಗೆ ವರ್ಕ್‌ ಆರ್ಡರ್‌ ಮತ್ತು ಸ್ಯಾಲರಿ ಕ್ರೆಡಿಟ್‌ ಬಿಲ್‌ನ್ನು ಪಿ.ಜಿ. ಪಾಳ್ಯ ಪಿ.ಹೆಚ್‌.ಸಿ ಗೆ. ಕಳುಹಿಸಿಕೊಡಲು ಚಾಮರಾಜನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ‌ ಎಫ್‌.ಡಿ.ಎ, ಮಹೇಶ್‌ ಎಂಬುವವರು 3 ಸಾವಿರ ರು ಲಂಚ ಸ್ವೀಕರಿಸುವ ಮುನ್ನ ACB ಬಲೆಗೆ ಬಿದ್ದಿದ್ದಾರೆ.

ಏಜೆನ್ಸಿ ಯವರು ವರ್ಕ್‌ ಆರ್ಡರ್‌ ಮತ್ತು ಸ್ಯಾಲರಿ ಕ್ರೆಡಿಟ್‌ ಬಿಲ್‌ನ್ನು ನೀಡಲು ಸಲುವಾಗಿ 5 ಸಾವಿರ ರೂ ಲಂಚದ
ಹಣವನ್ನು ಕೊಡುವಂತೆ ಮಹೇಶ್ ಬೇಡಿಕೆ ಇಟ್ಟಿದ್ದರು. ಇದನ್ನು ಓದಿ –ಟ್ರಯಲ್ ಬ್ಲಾಸ್ಟ್ ಆಧರಿಸಿ ಗಣಿಗಾರಿಕೆಗೆ ಅವಕಾಶ ಬೇಡ: ಸಿಎಂಗೆ ಸುಮಲತಾ ಪತ್ರ

ಪಿರ್ಯಾದಿಯವರು ಎಫ್‌.ಡಿ.ಎ. ಮಹೇಶ್‌ರವರನ್ನು ಡಿ.ಹೆಚ್‌.ಓ ಕಚೇರಿಯಲ್ಲಿ ಇಂದು ಸಂಪರ್ಕಿಸಿ
3,000ರು ಲಂಚದ ಹಣ ಕೊಡುವಂತೆ ಪಿರ್ಯಾದಿಯವರಿಗೆ ಬೇಡಿಕೆ ಇಟ್ಟು ಒತ್ತಾಯಿಸಿದರು.

ಆರೋಪಿ ಸರ್ಕಾರಿ ನೌಕರ ಮಹೇಶ್‌, ಪ್ರಥಮ ದರ್ಜೆ ಸಹಾಯಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಚಾಮರಾಜನಗರ ಜಿಲ್ಲೆ ಇವರು, ಅವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಯಲ್ಲಿ ಪಿರ್ಯಾದುದಾರರಿಂದ 3,000 ರುಗಳ ಲಂಚದ ಹಣವನ್ನು ಸ್ಟೀಕರಿಸುವ ವೇಳೆ ,ACB SP ಸಜಿತ್ ಮಾರ್ಗದರ್ಶನದಲ್ಲಿ ಚಾಮರಾಜನಗರ ಜಿಲ್ಲೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್‌ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ನಡೆಸಿದ ಟ್ರಾಪ್‌ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿರುತ್ತಾರೆ. ಇದನ್ನು ಓದಿ – ನಿಖಿಲ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಇಲ್ಲ: ಮಾಜಿ ಸಿಎಂ ಹೆಚ್​​ಡಿ ಕೆ

FDA ಮಹೇಶ್‌ ಬಂಧಿಸಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ, ಪ್ರಕರಣದ ತನಿಖೆ ಮುಂದುವರೆದಿದೆ.

Copyright © All rights reserved Newsnap | Newsever by AF themes.
error: Content is protected !!