ಸಾಲಕ್ಕೆ ಹೆದರಿ ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Team Newsnap
1 Min Read
3 people from same family committed suicide in Bangalore due to fear of debt ಸಾಲಕ್ಕೆ ಹೆದರಿ ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಉದ್ಯಮದಲ್ಲಿ ನಷ್ಟ ಮಾಡಿಕೊಂಡ ಒಂದೇ ಕುಟುಂಬದ ಮೂವರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿ ಹೆಚ್ ‌ಎಸ್‌ ಆರ್ ಲೇಔಟ್ ​ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಜರುಗಿದೆ.

ಕೇರಳ ನಿವಾಸಿಗಳಾದ ಸಂತೋಷ್ ಕುಮಾರ್, ಪತ್ನಿ ಮತ್ತು ಮಗಳು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಂಡ್ಯ , ಮೈಸೂರು ಜಿಲ್ಲಾಧಿಕಾರಿಗಳ ಎತ್ತಂಗಡಿ : ರಾಜ್ಯದ 21 ಮಂದಿ IAS ಅಧಿಕಾರಿಗಳ ವರ್ಗಾವಣೆ

ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಕುಮಾರ್ ಮಷೀನ್ ಟೂಲ್ಸ್ ಅಂಗಡಿ ಹೊಂದಿದ್ದರು. ಇತ್ತೀಚೆಗೆ ಉದ್ಯಮದಲ್ಲಿ ನಷ್ಟ ಹೊಂದಿ ಸಾಲ ಮಾಡಿಕೊಂಡಿದ್ದರು. ಸಾಲಗಾರರ‌ ಕಾಟಕ್ಕೆ ಬೇಸತ್ತು ಮೂವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.


ಮೃತ ಸಂತೋಷ್ ಕುಮಾರ್ ಮಗಳು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಹೆಚ್​​ಎಸ್​​ಆರ್​​ ಲೇಔಟ್​​ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a comment