ಚಾಮುಂಡಿ ಬೆಟ್ಟಕ್ಕೆ 3 ದಿನ ಭಕ್ತರ ಪ್ರವೇಶ ನಿಷೇಧ

Team Newsnap
1 Min Read

ಮೈಸೂರಿನ ಚಾಮುಂಡಿಬೆಟ್ಟಕ್ಕೆ ಇಂದಿನಿಂದ ಮೂರು ದಿನಗಳ ಕಾಲ ಭಕ್ತರ ಪ್ರವೇಶ ನಿಷೇಧಿಸಲಾಗಿದೆ.

ಕೊರೊನಾ ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತ ಈ ಕ್ರಮಕೈಗೊಂಡಿದೆ. ಶ್ರಾವಣ ಮಾಸದ ಎರಡನೇ ಶುಕ್ರವಾರ ಮತ್ತು ವರಮಹಾಲಕ್ಷಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಭಕ್ತರ ದಂಡೇ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಹರಿದು ಬರುವುದನ್ನು ತಡೆಯುವ ಉದ್ದೇಶದಿಂದ ದೇವಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿಲ್ಲ.

ಸಂಭ್ರಮದ ಆಚರಣೆ:

chamundi betta 1

ಈ ನಡುವೆ ರಾಜ್ಯಾದ್ಯಂತ ಇಂದು ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿದ ಆಚರಿಸಲಾಗುತ್ತಿದೆ.ಹೊಸ ಹೊಸ ನೋಟುಗಳುನ್ನು ತಟ್ಟೆಯಲ್ಲಿ ಇಟ್ಟು ಐಶ್ವರ್ಯ ದೇವತೆಯನ್ನು ಪೂಜಿಸುವ ಸಂಪ್ರದಾಯವನ್ನು ಅನೇಕರು ಇಟ್ಟುಕೊಂಡಿದ್ದಾರೆ.

ಸಿಹಿ ತಿನಿಸುಗಳನ್ನು ಮನೆಯಲ್ಲಿ ತಯಾರಿಸಿ ದೇವಿಗೆ ನೈವೇದ್ಯ ಅರ್ಪಿಲಾಗುತ್ತದೆ. ಹಲವು ಶುಭ ಕಾರ್ಯಗಳು ಇಂದೇ ಚಾಲನೆ ನೀಡುವ ಸಂಪ್ರದಾಯವೂ ಇದೆ.

Share This Article
Leave a comment