ಹನೂರು : ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಮಹದೇಶ್ವರ ಬೆಟ್ಟದ ಮುಡಿಶೆಡ್ ಸಮೀಪದ ಹಣ್ಣುಕಾಯಿ ಮಾರಾಟ ಕೇಂದ್ರದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಅಭಿಷೇಕ್ (23), ಹಾವೇರಿಯ ಆದರ್ಶ (22) ಹಾಗೂ ಮೈಸೂರಿನ ಉದಯಕುಮಾರ್ (22) ಬಂಧಿತ ಆರೋಪಿಗಳು. ಮಲೆ ಮಹದೇಶ್ವರ ಬೆಟ್ಟದಲ್ಲಿ ಗಾಂಜಾ ಮಾರಾಟ ಮಾಡಲು ಯತಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ಕೊಟ್ಟ ದೂರು ನಮ್ಮದಲ್ಲ : ಕೃಷಿ ನಿರ್ದೇಶಕ ಸ್ಪಷ್ಟನೆ
ಇಂತಹ ಪವಿತ್ರ ಸ್ಥಳದಲ್ಲಿ ಇಂತಹ ಅಕ್ರಮ ಚಟುವಟಿಕೆಗಳಿಗೆ ನಡೆಯುತ್ತಿರುವುದಕ್ಕೆ ಮೂಲವಾಗಿ ಭದ್ರತಾ ಲೋಪವೇ ಕಾರಣವಾಗಿದೆ ದಿನ ನಿತ್ಯ ಮಾದಪ್ಪನ ಸನ್ನಿದಿಗೆ ಸಾವಿರಾರು ಭಕ್ತಾದಿಗಳು ಬರುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿ ಸನ್ನಿದಿಯಲ್ಲಿ ಮುಂದುವರಿದ ತಪಾಷಣ ಕೇಂದ್ರಗಳನ್ನು ನಿಯೋಜನೆ ಮಾಡದೇ ಇರುವುದು ಇಂತಹ ಅಕ್ರಮ ಚಟುವಟಿಕೆಗಳಿಗೆ ಎಡೆ ಮಾಡಿ ಕೊಟ್ಟಿದೆ ಮುಂದಾದರು ಅರಣ್ಯ ಇಲಾಖೆ ಮತ್ತು ದೇವಸ್ಥಾನ ಆಡಳಿತ ಮಂಡಳಿ ಇದರ ಬಗ್ಗೆ ಕ್ರಮ ವಹಿಸುತ್ತಾರ ಕಾದು ನೋಡಬೇಕಿದೆ.
ವರದಿ :- ನಾಗೇಂದ್ರ ಪ್ರಸಾದ್, ಹನೂರು, ಚಾಮರಾಜನಗರ.
ಚಾಮರಾಜನಗರ ಎಂಎಂ ಹಿಲ್ಸ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ – Three Arrested for Selling Ganja in MM Hills Chamarajanagar #drugs #hanur
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ